ಫಲವತ್ತಾದ ಭೂಮಿಗೆ ವಿಜಯಪುರ ಹೆಸರುವಾಸಿ

Vijayapura is famous for its fertile land.
ವಿಜಯಪುರ ಹೊರ ವಲಯದ ಹಿಟ್ನಳ್ಳಿಯ ಕೃಷಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಣ್ಣು ದಿನಾಚಾರಣೆಯನ್ನು ಧಾರವಾಡ ಕೃಷಿ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯೆ ಪಾರ್ವತಿ ಕುರ್ಲೆ ಉದ್ಘಾಟಿಸಿದರು. ಬಸವರಾಜ ಬಿರಾದಾರ, ಡಾ. ಎ. ಭೀಮಪ್ಪ, ಡಾ. ರವೀಂದ್ರ ಬೆಳ್ಳಿ ಮತ್ತಿತರರಿದ್ದರು.
Published on

ವಿಜಯಪುರ: ಪ್ರಸ್ತುತ ದಿನಗಳಲ್ಲಿ ಫಲವತ್ತಾದ ಮಣ್ಣಿನ ಸಂರಕ್ಷಣೆ ಮತ್ತು ಮಣ್ಣಿನ ಸವಕಳಿ ಕುರಿತು ಸಂರಸಲು ಚಿಂತನೆಮಾಡಬೇಕಿದೆ ಎಂದು ಧಾರವಾಡ ಕೃಷಿ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯೆ ಪಾರ್ವತಿ ಕುರ್ಲೆ ಸಲಹೆ ನೀಡಿದರು.

ನಗರ ಹೊರ ವಲಯದ ಹಿಟ್ನಳ್ಳಿಯ ಕೃಷಿ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಮಣ್ಣು ದಿನಾಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನಿಗಳು ಹಾಗೂ ಇಲಾಖಾ ಅಧಿಕಾರಿಗಳು ಮಣ್ಣು ಮತ್ತು ನೀರು ಸಂರಕ್ಷಣೆಯ ಕ್ರಮಗಳನ್ನು ಅಳವಡಿಸಿಕೊಳ್ಳಲು ರೈತರಿಗೆ ಅರಿವು ಮೂಡಿಸಲು ಮುಂದಾಗಬೇಕು ಎಂದರು.

ವಿಜಯಪುರ ಜಿಲ್ಲೆಯು ಫಲವತ್ತಾದ ಭೂಮಿಗೆ ಹೆಸರುವಾಸಿಯಾಗಿದೆ. ಅಲ್ಲದೆ, ಜಿಲ್ಲೆಯು ಸದ್ಯ ಸಮಗ್ರ ನೀರಾವರಿಗೆ ಒಳಪಟ್ಟಿದ್ದು, ಡೋಣಿ ಪಾತ್ರದ ರೈತರ ಜಮೀನು ಸವಳು&ಜವಳಾಗುತ್ತಿದೆ. ಈ ಹಿನ್ನೆಲೆ ರೈತರಿಗೆ ಅರಿವು ಮೂಡಿಸಲು ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.

ಮುಖ್ಯ ಅತಿಥಿ ಮಣ್ಣು ಉಳಿಸಿ ಅಂದೋಲನ ಮುಖ್ಯಸ್ಥ ಬಸವರಾಜ ಬಿರಾದಾರ ಮಾತನಾಡಿ, ಪಂಚಭೂತಗಳಲ್ಲಿ ಒಂದಾಗಿರುವ ಮಣ್ಣು ಬೆಲೆ ಕಟ್ಟಲಾಗದ ಸಂಪತ್ತು. ಮಾನವನ ಅತ್ಯವಶ್ಯ ವಸ್ತಗಳು ಮೂಲಾಧಾರವೇ ಮಣ್ಣು. ಪ್ರಕೃತಿಯ ಜೀವಾಳವಾದ ಮಣ್ಣನ್ನು ರಸಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ಅಧ್ಯಕ್ಷತೆ ವಹಿಸಿದ ಕೃಷಿ ಮಹಾವಿದ್ಯಾಲಯದ ಡೀನ್​ ಡಾ. ಎ. ಭೀಮಪ್ಪ ಮಾತನಾಡಿ, ಮಹಾವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ಮಣ್ಣು ಪರೀೆ ಮತ್ತು ಸಂರಕ್ಷಣೆ, ಬೆಳೆ ಸಂಯೋಜಿತ ರಸಗೊಬ್ಬರಗಳ ಬಳಕೆ, ರಸಗೊಬ್ಬರ ಜೊತೆಯಲ್ಲಿ ಸಾವಯವ ಗೊಬ್ಬರ, ಲುಪೋಷಕಾಂಶಗಳ ಬಳಕೆಯಿಂದ ಮಣ್ಣಿನ ಆರೋಗ್ಯ ಹಾಗೂ ಪೌಷ್ಠಿಕಾಂಶ ಭದ್ರತೆ ಕುರಿತು ತಿಳಿವಳಿಕೆ ನೀಡಲಾಗುತ್ತಿದೆ ಎಂದರು.

ಅತಿಥಿಯಾಗಿ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಮಾತನಾಡಿ, ಮಣ್ಣಿನ ಸಂರಕ್ಷಣೆ ಹಾಗೂ ಸಮರ್ಪಕ ನಿರ್ವಹಣೆ ಅತ್ಯವಶ್ಯ ಹಾಗೂ ಅನಿವಾರ್ಯ. ಹೀಗಾಗಿ, ಅವುಗಳನ್ನು ವೈಜ್ಞಾನಿಕವಾಗಿ ನಿರ್ವಹಿಸಿ, ಅದರ ಉತ್ಪಾದನಾ ಸಾಮರ್ಥ್ಯ ಉತ್ತಮ ಮಟ್ಟದಲ್ಲಿ ಕಾಪಾಡುವ ಜತೆಗೆ ಮುಂದಿನ ಪೀಳಿಗೆಗೆ ಕೊಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ವಿಶ್ವ ಮಣ್ಣು ದಿನಾಚರಣೆ ಹಿನ್ನೆಲೆ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಮಹಾವಿದ್ಯಾಲಯದ ಡಾ. ಎನ್​.ಡಿ. ಸುನೀತಾ, ಡಾ. ಎಸ್​.ಎಚ್​. ಗುತ್ತರಗಿ, ಡಾ. ಮಹಾಂತೇಶ ತೆಗ್ಗಿ, ಡಾ. ಸಿದ್ದರಾಮ ಪಾಟೀಲ, ಡಾ. ಕಿರಣಕುಮಾರ, ಡಾ. ಸುದೀಪಕುಮಾರ, ಕೆ.ಎನ್​. ನದಾಫ್​ ಮತ್ತಿರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net