

ವಿಜಯಪುರ: ದೀಪಾವಳಿ ಪ್ರಯುಕ್ತ ಭಾರತೀಯ ಜೈನ್ ಸಂಘಟನೆ ಕಾರ್ಯಕರ್ತರು ಗುರುವಾರ ವಿವಿಧ ಬಡಾವಣೆಗಳ ನಿವಾಸಿಗಳಿಗೆ ಅಗತ್ಯ ಸಾಮಗ್ರಿ ಹಾಗೂ ಆಹಾರ ಕಿಟ್ ವಿತರಿಸಿದರು.
ಶಿವಗಿರಿ, ಬಡಿಕಮಾನ ಹಾಗೂ ವಿವಿಧ ಬಡಾವಣೆಯ 200 ಬಡ ಕುಟುಂಬಗಳಿಗೆ ದೈನಂದಿನ ಜೀವನಕ್ಕೆ ಬೇಕಾಗುವ ಅಗತ್ಯ ಸಾಮಗ್ರಿ ಹಾಗೂ ಹಬ್ಬದ ವಸ್ತುಗಳಾದ ರಂಗೋಲಿ, ಸಿಹಿತಿನ್ನಿಸು, ಇನ್ನಿತರ ಆಹಾರ ಸಾಮಗ್ರಿ ಹಾಗೂ ಮಾಸ್ಕ್‌ಗಳನ್ನು ವಿತರಿಸಿದರು.
ತಹಸೀಲ್ದಾರ್ ಮೋಹನಕುಮಾರಿ, ಬಿಜೆಎಸ್ ಅಧ್ಯಕ್ಷ ಮಹಾವೀರ್ ಪರೇಖ್, ರಾಜ್ಯ ಕಾರ್ಯದರ್ಶಿ ವಿಜಯ್ ಎನ್. ರುಣವಾಲ, ಅಮಿತ್ ಕಟಾರಿಯಾ, ದೀಪಕ್ ಎಚ್. ರುಣವಾಲ, ನರೇಂದ್ರ ಸುರಾನಾ, ವಿನಯ್ ರುಣವಾಲ, ರಿಕಾಬ್ ರುಣವಾಲ, ನೀರಜ್ ರುಣವಾಲ, ವರ್ಧಮಾನ್ ಶ್ನಾಕ್ವಾಸಿನ್, ಜೈನ್ ರುಣವಾಲ, ನಿತೀನ್ ರುಣವಾಲ, ಶಾಂತಿಲಾಲ್ ಬೋತ್ರಾ ಮತ್ತಿತರರಿದ್ದರು.