ರೈಲ್ವೆ ಮೇಲ್ಸೇತುವೆ ಕಾಮಗಾರಿ ಪರಿವೀಕ್ಷಣೆ

VJP 8-2
Published on

ವಿಜಯಪುರ: ನಗರದ ಇಬ್ರಾಹಿಂಪುರ ರೈಲ್ವೆ ಮೇಲ್ಸೇತುವೆ ಕಾಮಗಾರಿ ಭರದಿಂದ ಸಾಗಿದ್ದು, ಸೋಮವಾರ ಸಂಸದ ರಮೇಶ ಜಿಗಜಿಣಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಅಂದಾಜು 20.62 ಕೋಟಿ ರೂ. ಮೊತ್ತದ ಈ ಕಾಮಗಾರಿಯು ಮಾರ್ಚ್ 2021ರ ಅಂತ್ಯದಲ್ಲಿ ಪೂರ್ಣಗೊಳಿಸಬೇಕೆಂದು ಗುತ್ತಿಗೆ ಹಾಗೂ ಅಧಿಕಾರಿಗಳಿಗೆ ಸೂಚಿಸಿದ ಸಂಸದರು ಕರೊನಾ ಹಾವಳಿ ಮುಗಿದ ನಂತರ ವಜ್ರಹನುಮಾನ ನಗರ ಹತ್ತಿರದ ರೈಲ್ವೆ ಮೇಲ್ಸೇತುವೆಯನ್ನು ಉದ್ಘಾಟಿಸುವುದಾಗಿ ತಿಳಿಸಿದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬೆಳಗಾವಿ ವಿಭಾಗದ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಚಂದ್ರಶೇಖರ ಕವಟಗಿ, ಬಸವರಾಜ ಬಿರಾದಾರ, ವಿವೇಕಾನಂದ ಡಬ್ಬಿ, ರವಿಕಾಂತ ಬಗಲಿ, ಗೂಳಪ್ಪ ಶಟಗಾರ, ಗೋಪಾಲ ಘಟಕಾಂಬಳೆ, ಭೀಮಾಶಂಕರ ಹದನೂರ, ಮಳುಗೌಡ ಪಾಟೀಲ, ಎಚ್.ಆರ್. ಮಾಚಪ್ಪನವರ, ಕಾಂತು ಸಿಂಧೆ, ವಿಠ್ಠಲ ನಡುವಿನಕೇರಿ, ರಾಜೇಂದ್ರ ವಾಲಿ, ವಿಜಯ ಜೋಶಿ, ಸಂಗಮೇಶ ಉಕ್ಕಲಿ, ಸಿದ್ದು ಮಲ್ಲಿಕಾರ್ಜುನಮಠ, ಪಾಪುಸಿಂಗ, ಸಚೀನ ಅಡಕಿ, ವಿಜಯ ಪಾಟೀಲ, ಭರತ ಕೋಳಿ, ರಾಕೇಶ ಕುಲಕರ್ಣಿ, ಪ್ರಶಾಂತ ಅಗಸರ, ಸಂದೀಪ ಪಾಟೀಲ, ಉಮೇಶ ಅಡಕಿ, ಸಂಪತ ಕೋವಳ್ಳಿ, ವಿನಾಯಕ ದಹಿಂಡೆ, ವಿಜಯ ಅಂಗಡಗೇರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net