

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನವನ್ನು ಬಿಜೆಪಿ ಕಾರ್ಯಕರ್ತರು ರಕ್ತದಾನ ಶಿಬಿರ ಏರ್ಪಡಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.
ನಗರದ ವಾರ್ಡ್ ನಂ. 1 ರ ಗ್ಯಾಂಗ್ ಬಾವಡಿ ಯಂತ್ರೋದ್ಧಾರ ಹನುಮಾನ ದೇವಸ್ಥಾನ ಮಂಗಲ ಕಾರ್ಯಾಲಯದಲ್ಲಿ ಗುರುವಾರ ರಕ್ತದಾನ ಶಿಬಿರ ಏರ್ಪಡಿಸಲಾಯಿತು.
ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಮಾತನಾಡಿ, ನರೇಂದ್ರ ಮೋದಿಯವರು ಸೆ.17ರಂದು 71ನೇ ವರ್ಷಕ್ಕೆ ಪದಾರ್ಪಣೆ ಮಾಡುವ ಸಂಭ್ರಮವನ್ನು ಬಿಜೆಪಿ ಸೇವಾ ಸಪ್ತಾಹದ ಮೂಲಕ ಆಚರಿಸುತ್ತಿದೆ. ರಾಜಕೀಯ ಕ್ಷೇತ್ರಕ್ಕೆ ಹೊಸ ದಿಕ್ಕು ತೋರಿದ, ಅಂತಾರಾಷ್ಟ್ರಿಯ ಮಟ್ಟದಲ್ಲಿ ಪ್ರಭಾವಿ ನಾಯಕರಾಗಿ ಮೂಡಿ ಬಂದ ಪ್ರಧಾನಿಯವರ ಹುಟ್ಟುಹಬ್ಬ ವಿಭಿನ್ನಾಗಿದ್ದು, ಇವರ ಹುಟ್ಟುಹಬ್ಬದ ದಿನದಂದು ರಕ್ತದಾನ ಮಾಡಿದ್ದು ಒಳ್ಳೆಯ ಕಾರ್ಯ ಎಂದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ವಿಶ್ವ ಪ್ರಸಿದ್ಧ ನಾಯಕ ನರೇಂದ್ರ ಮೋದಿಯವರು ಭಾರತದ ಅಭಿವೃದ್ಧಿಯ ಧ್ಯೇಯದೊಂದಿಗೆ ವಿಶ್ವವೇ ಭಾರತದ ಕಡೆಗೆ ನೋಡುವಂತೆ ಆಡಳಿತ ನಡೆಸುತ್ತಿದ್ದಾರೆ. ವಿಶ್ವ ಯೋಗ ದಿನಾಚರಣೆ, ನೋಟ್ ಬ್ಯಾನ್, ವಿದೇಶಾಂಗ ನೀತಿ, 370 ವಿಧಿ ರದ್ಧತಿ ಹೀಗೆ ಹಲವು ಮಹತ್ತರ ಕಾರ್ಯ ಕೈಗೊಂಡಿದ್ದಾರೆ. ದೇಶದಲ್ಲಿ ಈವರೆಗೆ ಆಗಿಹೋದ ಪ್ರಧಾನಮಂತ್ರಿಗಳಿಗೆ ಹೋಲಿಸಿದರೆ ಮೋದಿ ಅವರದ್ದು ಅತಿ ಶ್ರೇಷ್ಠ ವ್ಯಕ್ತಿತ್ವ ಎಂದರು.
ವಿಭಾಗ ಪ್ರಭಾರಿ ಚಂದ್ರಶೇಖರ ಕವಟಗಿ, ಪ್ರಕಾಶ ಅಕ್ಕಲಕೋಟ, ಬಸವರಾಜ ಹೂಗಾರ ಮಾತನಾಡಿದರು. ಶಿವರುದ್ರ ಬಾಗಲಕೋಟ, ಮಲ್ಲಿಕಾರ್ಜುನ ಜೋಗೂರ, ಮಳುಗೌಡ ಪಾಟೀಲ, ಗೋಪಾಲ ಘಟಕಾಂಬಳೆ, ಬಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಭೀಮಾಶಂಕರ ಹದನೂರ, ವಿವೇಕಾನಂದ ಡಬ್ಬಿ, ಕಾಂತು ಸಿಂಧೆ, ರಾಜಕುಮಾರ ಸಗಾಯಿ, ವಿಜಯ ಜೋಶಿ, ಸತೀಶ ಪಾಟೀಲ, ಅನೀಲ ಚವಾಣ್, ಅನೀಲ ಉಪ್ಪಾರ, ಮಲ್ಲಿಕಾರ್ಜುನ ಬಗಲಿ, ಅನೀಲ ಬಿರಾದಾರ, ರಾಘವೇಂದ್ರ ಕಾಪ್ಸೆ, ಅಶೋಕ ರಾಠೋಡ, ಸಿದ್ರಾಮ ಆನಗೊಂಡ, ಶಿವು ದೊಡ್ಡಿ, ಪ್ರಶಾಂತ ಪೂಜಾರಿ, ಪ್ರವೀಣ ಬರೆಗಲ್, ಪ್ರವೀಣ ಕುಡಗಿ, ರವಿ ಚವಾಣ್, ಪ್ರವೀಣ ಬಿರಾದಾರ, ಬಸವರಾಜ ಗೊಳಸಂಗಿ, ಮಲ್ಲಮ್ಮ ಜೋಗೂರ, ಚಂದ್ರು ಚೌಧರಿ, ಗುರು ಗಚ್ಚಿನಮಠ, ಭರತ ಕೋಳಿ, ಕೃಷ್ಣಾ ಗುನಾಳಕರ, ಪಾಪುಸಿಂಗ ರಜಪೂತ, ಅನೀಲ ಕೊಂಗಿ, ಆದಿತ್ಯ ತಾವರಗೇರಿ, ಕಿರಣ ನಾಯಕ ಮತ್ತಿತರರಿದ್ದರು.