ಪರಶುರಾಮ ಭಾಸಗಿ ವಿಜಯಪುರ
ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಆಲಮೇಲಕ್ಕೆ ಮಂಜೂರಾಗಿದ್ದ ತೋಟಗಾರಿಕೆ ಕಾಲೇಜಿಗೆ ಗ್ರಹಣ ಆವರಿಸಿದ್ದು, ಈ ಕಾಲೇಜನ್ನು ತಿಡಗುಂದಿಯಲ್ಲಿ ಸ್ಥಾಪಿಸುವುದೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಈ ಬಗ್ಗೆ ಈಗಾಗಲೇ ಡಿಸಿಎಂ ಗೋವಿಂದ ಕಾರಜೋಳ ಮತ್ತು ಸರ್ಕಾರದ ಅಧೀನ ಕಾರ್ಯದರ್ಶಿಗಳಿಗೆ ಪ್ರಸ್ತಾವನೆ ಸಲ್ಲಿಸಿರುವ ಬಾಗಲಕೋಟೆ ತೋಟಗಾರಿಕೆ ವಿವಿ, ಆಲಮೇಲಕ್ಕಿಂತ ತಿಡಗುಂದಿಯೇ ಸೂಕ್ತ ಎಂಬ ತುಲನಾತ್ಮಕ ವರದಿ ಸಲ್ಲಿಸಿದೆ. 2020 ಜ. 2 ರಂದು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಬಜೆಟ್‌ನಲ್ಲಿ ಅದಕ್ಕೊಂದು ತಾರ್ಕಿಕ ಅಂತ್ಯ ಸಿಗುವ ಲಕ್ಷಣಗಳು ಗೋಚರಿಸುತ್ತಿವೆ.
ತಿಡಗುಂದಿ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದಲ್ಲಿ ನೂತನ ತೋಟಗಾರಿಕೆ ಮಹಾವಿದ್ಯಾಲಯ ಸ್ಥಾಪಿಸಲು ಗ್ರಾ.ಪಂ. ಸದಸ್ಯರು ಹಾಗೂ ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘ, ರೈತ ಸಮುದಾಯ, ಜನಪ್ರತಿನಿಧಿಗಳು ಹಾಗೂ ತೋಟಗಾರಿಕೆಯಲ್ಲಿ ತೊಡಗಿಸಿಕೊಂಡ ವಿವಿಧ ಪಾಲುದಾರರು ಬೇಡಿಕೆ ಸಲ್ಲಿಸಿದ್ದಾರೆ.
ತಿಡಗುಂದಿಯಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪಿಸಲು ಅವಶ್ಯವಿರುವ ಮೂಲ ಸೌಕರ್ಯ ಇರುವುದನ್ನು ಗಮನಿಸಿ 2018ರಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, 2019 ಜುಲೈ 18 ರಂದು ಆಲಮೇಲದಲ್ಲಿ ಕಾಲೇಜು ಸ್ಥಾಪಿಸಲು ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಸದ್ಯಕ್ಕೆ ಕಾಲೇಜು ಸ್ಥಾಪಿಸಲು 20 ಕೋಟಿ ರೂ. ತುರ್ತಾಗಿ ಅನುದಾನ ಬೇಕು ಎಂದು ತೋವಿವಿ ಕುಲಪತಿ ಡಾ. ಇಂದಿರೇಶ ತಿಳಿಸಿದ್ದಾರೆ.

ಆಲಮೇಲದಲ್ಲಿ ಪಟ್ಟಣಕ್ಕೆ ಹೊಂದಿಕೊಂಡಂತೆ 178 ಎಕರೆ ಜಾಗ ಮೀಸಲಿದೆಯಾದರೂ ಯಾವುದೇ ಮೂಲ ಸೌಕರ್ಯಗಳಿಲ್ಲ. ಇದೇ ಕಾರಣಕ್ಕೆ ಪ್ರವೇಶ ಪ್ರಕ್ರಿಯೆ ನಡೆಯಲಿಲ್ಲ. ಆದರೆ, ತಿಡಗುಂದಿಯಲ್ಲಿ ಅವಶ್ಯಕವಿರುವ ಕಟ್ಟಡ, ಪ್ರಯೋಗಾಲಯ ಮತ್ತಿತರ ಮೂಲ ಸೌಲಭ್ಯಗಳಿವೆ. ಸಂಶೋಧನಾ ಕೇಂದ್ರವು ವಿಜಯಪುರ- ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್-52)ಗೆ ಹೊಂದಿಕೊಂಡು ಮಹಾನಗರದಿಂದ ಕೇವಲ 12 ಕಿ.ಮೀ. ಅಂತರದಲ್ಲಿದೆ.
ಆಲಮೇಲದಲ್ಲಾದರೆ ಸಿಬ್ಬಂದಿ ಸಂಬಳ, ಪ್ರಯೋಗಾಲಯ, ಕಾಲೇಜು ಕಟ್ಟಡ, ಗ್ರಂಥಾಲಯ, ವಿದ್ಯಾರ್ಥಿ ವಸತಿ ನಿಲಯ, ಸಾರಿಗೆ, ಯಂತ್ರೋಪಕರಣ ಸೇರಿ ಮತ್ತಿತರ ಸೌಲಭ್ಯ ಒದಗಿಸಲು 8415 ಲಕ್ಷ ರೂ. ಬೇಕು. ತಿಡಗುಂದಿಯಲ್ಲಾದರೆ ಕೇವಲ 3493 ಲಕ್ಷ ರೂ. ಸಾಕಾಗಲಿದೆ. ತಿಡಗುಂದಿಯಲ್ಲಿ ಈಗಾಗಲೇ ಅಗತ್ಯವಿರುವ ಗ್ರಂಥಾಲಯ, ಬೋಧನಾ ಕೊಠಡಿ, ಕ್ರೀಡಾಂಗಣ, ಬೆಳೆ ತಾಕುಗಳು, ಪ್ರಯೋಗಾಲಯ, ಸಾರಿಗೆ ಹೀಗೆ ಸಕಲ ಸೌಲಭ್ಯಗಳಿವೆ.
ತೋಟಗಾರಿಕೆ ಬೆಳೆಗೆ ಹೆಸರಾದ ವಿಜಯಪುರ ಜಿಲ್ಲೆಯ ರೈತರ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಾಲೇಜು ಅವಶ್ಯಕತೆ ಇದ್ದು, ಅದನ್ನು ಆಲಮೇಲಗಿಂತ ತಿಡಗುಂದಿಯಲ್ಲಿ ಸ್ಥಾಪಿಸುವುದೇ ಒಳಿತು ಎಂಬುದು ಸರ್ವರ ಅಭಿಪ್ರಾಯ. ಈ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ಕಾದು ನೋಡಬೇಕು.
ಜನವರಿ ತಿಂಗಳಲ್ಲಿ ಹೊಸದಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಜೆಟ್ ಮೀಟಿಂಗ್‌ನಲ್ಲಿ ಕೆಲವು ಹೊಸ ನಿರ್ಧಾರಗಳಾಗಿವೆ ಎಂದು ಕೇಳಿದ್ದೇನೆ. ಸರ್ಕಾರದ ಮಟ್ಟದಲ್ಲಿ ಯಾವ ನಿರ್ಧಾರಗಳಾಗಿವೆ ಎಂಬುದರ ಬಗ್ಗೆ ಈವರೆಗೂ ಖಚಿತ ಮಾಹಿತಿ ಇಲ್ಲ. ಏನಾಗಲಿದೆ ಎಂಬುದು ಕಾದು ನೋಡಬೇಕು.
ಡಾ. ಕೆ.ಎಂ. ಇಂದ್ರೇಶ, ಕುಲಪತಿ, ತೋವಿವಿ, ಬಾಗಲಕೋಟೆ