ಬಸವನಾಡಿನ ಯುವತಿ ಯುಪಿಎಸ್​ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಅಕ್ಕನ ಹಾದಿಯಲ್ಲೇ ತಂಗಿಯ ಪಯಣ

Vijayapura Girl
Published on

ವಿಜಯಪುರ: ಯುಪಿಎಸ್​ಸಿ ಪರೀಕ್ಷೆಯಲ್ಲಿ ಬಸವನಾಡಿನ ಯುವತಿ ದೇಶಕ್ಕೆ 626ನೇ ರ್ಯಾಂಕ್​ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾಳೆ.

ಗುಮ್ಮಟನಗರಿಯ ನಿವಾಸಿ ಸವಿತಾ ಗೋಟ್ಯಾಳ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಅಲ್ಲದೇ, ಸವಿತಾ ಅಕ್ಕ ಅಶ್ವಿನಿ ಗೋಟ್ಯಾಳ ಐಪಿಎಸ್ ಅಧಿಕಾರಿಯಾಗಿದ್ದು, ಸದ್ಯ ಪಂಜಾಬಿನ ಲುಧಿಯಾನಾದಲ್ಲಿ ಎಡಿಸಿಪಿಯಾಗಿದ್ದಾರೆ.

ಇನ್ನು ಇವರ ತಂದೆ ಸಿದ್ದಪ್ಪ ಗೋಟ್ಯಾಳ ಬಿಎಸ್​ಎನ್​ಎಲ್​ನಲ್ಲಿ ನೌಕರರಾಗಿದ್ದರು. ಹಿರಿಯ ಮಗಳು ಐಪಿಎಸ್ ಅಧಿಕಾರಿಯಾಗುತ್ತಿದ್ದಂತೆ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಹಿರಿಯಕ್ಕನ ಸಾಧನೆಯ ಹಾದಿಯಲ್ಲಿ ತಂಗಿಯ ಪಯಣದಿಂದ ಗೋಟ್ಯಾಳ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net