15 ಕೆಜಿ ಗಾಂಜಾ ವಶ

Ganja
Published on

ವಿಜಯಪುರ: ಅಕ್ರಮವಾಗಿ ಹೊಲದಲ್ಲಿ ಬೆಳೆದಿದ್ದ 15 ಕೆಜಿ ಗಾಂಜಾವನ್ನು ವಿಜಯಪುರದ ಗಾಂಧಿಚೌಕ್ ಪೊಲೀಸರು ಭಾನುವಾರ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಕರಬಂತನಾಳ ಗ್ರಾಮದ ಕಾಂತುನಾಯಕ ಬಂಧಿತ ಆರೋಪಿ. ವಿಜಯಪುರ ನಗರದ ಬಬಲೇಶ್ವರ ರಸ್ತೆಯ ಜಮಖಂಡಿ ನಾಕಾ ಹತ್ತಿರದ ಹೊಲದಲ್ಲಿ ಗಾಂಜಾ ಬೆಳೆದಿರುವ ಮಾಹಿತಿ ಮೇರೆಗೆ ಪಿಎಸ್‌ಐ ಸುನೀಲ ಕಾಂಬಳೆ, ಸಿಪಿಐ ರವೀಂದ್ರ ನಾಯ್ಕೋಡಿ ನೇತೃತ್ವದ ತಂಡ ದಾಳಿ ನಡೆಸಿ ಗಾಂಜಾ ವಶಕ್ಕೆ ಪಡೆದು, ಆರೋಪಿ ಬಂಧಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net