ಡಿಸಿಯಿಂದ ಪ್ರವಾಸೋದ್ಯಮ ಕಾಮಗಾರಿ ಪರಿಶೀಲನೆ

VJP 28-4
Published on

ವಿಜಯಪುರ: ಪ್ರವಾಸಿ ತಾಣಗಳ ಸಂರಕ್ಷಣೆ ಹಾಗೂ ಪ್ರವಾಸೋದ್ಯಮ ಇಲಾಖೆ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಶನಿವಾರ ಪರಿಶೀಲನೆ ನಡೆಸಿದರು.

ನಗರದ ಆನಂದ ಮಹಲ್, ಪಾತ್‌ವೇ ಕಾಮಗಾರಿ, ಗಗನ ಮಹಲ್ ಕಂದಕದಿಂದ ಇತರ ಸ್ಮಾರಕಗಳಿಗೆ ನೀರು ಸರಬರಾಜು ಮಾಡುವ ಸ್ಥಳ ಪರಿಶೀಲಿಸಿದರು. ಪ್ರವಾಸೋದ್ಯಮ ಇಲಾಖೆ ಸಲ್ಲಿಸಿದ ವಿವಿಧ ಪ್ರಸ್ತಾವನೆಗಳ ಕುರಿತು ಚರ್ಚಿಸಿದರು.

ಆನಂದ ಮಹಲ್ ಪಾರಂಪರಿಕ ಕಟ್ಟಡದಲ್ಲಿ ವಿಜಯಪುರ ಪ್ರವಾಸೋದ್ಯಮ ವ್ಯಾಖ್ಯಾನ ಕೇಂದ್ರ ಸ್ಥಾಪನೆಗೆ 5 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕಟ್ಟಡ ಸಂರಕ್ಷಣೆ ಕುರಿತು ಪರಿಶೀಲಿಸಿದರು. 136.50ಲಕ್ಷ ರೂ. ವೆಚ್ಚದಲ್ಲಿ ನಗರದ ಪ್ರಮುಖ ಐತಿಹಾಸಿಕ ಸ್ಮಾರಕಗಳ ಬಳಿ ನಿರ್ಮಿಸಲಾಗಿರುವ ಉದ್ಯಾನವನಗಳಿಗೆ ಗಗನ ಮಹಲ್ ಕಂದಕದಿಂದ ನೀರು ಸರಬರಾಜು ಮಾಡುವ ಕಾಮಗಾರಿ ಕುರಿತು ಇಲಾಖೆ ಅಧಿಕಾರಿಗಳಿಂದ ಅವಶ್ಯಕ ಮಾಹಿತಿ ಪಡೆದರು.

ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಸೇರಿದಂತೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net