ವಿವೇಕರ ತತ್ವಾದರ್ಶ ರೂಢಿಸಿಕೊಳ್ಳಿ

VMS 13-7
Published on

ವಿಜಯಪುರ: ಮಕ್ಕಳು ಸ್ವಾಮಿ ವಿವೇಕಾನಂದರಂತಾಗಲು ಏಕಾಗ್ರತೆ ಹಾಗೂ ಅವರ ತತ್ವಾದರ್ಶಗಳನ್ನು ಮೈಗೂಡಿಸಕೊಳ್ಳಬೇಕೆಂದು ಯೋಗ ಶಿಕ್ಷಕ ಬಿ.ಸಿ. ಸಾರವಾಡ ಹೇಳಿದರು.
ಆದರ್ಶನಗರದ ಎಕ್ಸಲಂಟ್ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರೌಢಶಾಲೆ ಮೇಲ್ವಿಚಾರಕ ಎಂ.ಎಚ್. ಹುಗ್ಗೇನವರ ಅಧ್ಯಕ್ಷತೆ ವಹಿಸಿ, ಜೀವನದಲ್ಲಿ ಗುರುವಿಲ್ಲದಿದ್ದರೂ ಗುರಿ ಇಟ್ಟುಕೊಳ್ಳಿ. ಅದು ನಿಮಗೆ ಗುರುವಾಗಿ ದಾರಿ ತೋರುತ್ತದೆ. ನೀವು ನಿರಂತರವಾಗಿ ಏನು ಯೋಚಿಸುತ್ತಿರುವಿರೋ ಅದೇ ನೀವಾಗುತ್ತಿರಿ ಎಂದು ಹೇಳಿದರು.
ಶಿಕ್ಷಕ ಎ.ಎನ್. ಕಂಬಾರ, ಶಾಲೆ ಪ್ರಧಾನಿ ರಾಹುಲ್ ಅನಚಿ ಮತ್ತಿತರರು ಉಪಸ್ಥಿತರಿದ್ದರು. ರಾಧಾ ಪಾಟೀಲ ಸ್ವಾಗತಿಸಿದರು. ಟಿ.ಬಿ.ಪಲ್ಲೇದ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net