

ವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಪಂ ನೌಕರರು ಹಮ್ಮಿಕೊಂಡಿದ್ದ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಮಂಗಳವಾರ ಜಿಪಂ ಸಿಇಒ ಗೋವಿಂದ ರೆಡ್ಡಿ ಭೇಟಿ ನೀಡಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸತ್ಯಾಗ್ರಹ ಹಿಂಪಡೆಯಲಾಯಿತು.
ಗ್ರಾಪಂ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ಎಲ್ಲ ಸಿಬ್ಬಂದಿ ವೇತನಕ್ಕಾಗಿ ಅವಶ್ಯಕ ಹಣ ಮಂಜೂರು ಮಾಡಿಸಬೇಕು. ಕಂಪ್ಯೂಟರ್ ಆಪರೇಟರ್‌ಗಳಿಗೆ ಬಡ್ತಿ ನೀಡಲು ವೃಂದ ಮತ್ತು ನೇಮಕಾತಿಗಳಿಗೆ ತಿದ್ದುಪಡಿ ಮಾಡಬೇಕು. ಕರವಸೂಲಿಗಾರ ಮತ್ತು ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಶೇ.70ರಿಂದ 100ರಷ್ಟು ಕೋಟಾ ಹೆಚ್ಚಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಗೆಜೆಟ್‌ನಲ್ಲಿ ಪ್ರಕಟಿಸುವಂತೆ ಒತ್ತಾಯಿಸಿದರು.
ಜಿಲ್ಲಾ ಸಮಿತಿ ಅಧ್ಯಕ್ಷ ಅಣ್ಣಾರಾಯ ಈಳಗೇರಿ ಮಾತನಾಡಿದರು. ಸದಸ್ಯರಾದ ವಿಠಲ ಹೊನಮೋರೆ, ಕುಮಾರ ರಾಠೋಡ, ಎಂ.ಕೆ. ಚಳ್ಳಗಿ, ಅಬ್ದುಲ್ ತಮ್ಮದಡ್ಡಿ, ರಾಜು ಬನ್ನಟ್ಟಿ, ಎಂ.ಎಸ್. ಶೇಕರಣಿ, ಶೇಖು ಲಮಾಣಿ, ಎಂ.ಕೆ. ಚಳ್ಳಗಿ, ಕುಮಾರ ರಾಠೋಡ, ರಾಜು ಜಾಧವ, ಮುರುಗೇಂದ್ರ ಹುಣಶ್ಯಾಳ, ಸುರೇಖಾ ರಜಪೂತ ನೀಲವ್ವ ಮಾದರ, ಭೀಮಾಬಾಯಿ ಬಾಣಿ ಮತ್ತಿತರರು ಉಪಸ್ಥಿತರಿದ್ದರು.