

ವಿಜಯಪುರ: ಡಾ. ಆರ್.ಎಸ್. ಮುಧೋಳ ಮತ್ತು ಡಾ. ಆರ್.ವಿ. ಕುಲಕರ್ಣಿ ಅವರ ಸಾಧನೆ ಬಿಎಲ್‌ಡಿಇ ಸಂಸ್ಥೆಗೆ ಮುಕುಟಪ್ರಾಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ, ಬಿಎಲ್‌ಡಿಇ ನಿರ್ದೇಶಕ ಸುನೀಲಗೌಡ ಪಾಟೀಲ ಹೇಳಿದರು.
ನಗರದ ಬಿಎಲ್‌ಡಿಇ ಆಡಳಿತ ಕಚೇರಿಯಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ. ಆರ್.ಎಸ್. ಮುಧೋಳ ಅವರು ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಗೌರವ ೆಲೊಶಿಪ್ ನೀಡಿದೆ. ಅಲ್ಲದೆ, ಡಾ. ಆರ್.ವಿ. ಕುಲಕರ್ಣಿ ಅವರು ಔಷಧ ವಿಜ್ಞಾನ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಪರಿಗಣಿಸಿ ಸ್ಟಾೃನ್‌ಫೊರ್ಡ್ ವಿಶ್ವವಿದ್ಯಾಲಯ ವಿಶ್ವದ ಶೇ.2ರಷ್ಟು ವಿಜ್ಞಾನಿಗಳಲ್ಲಿ ಒಬ್ಬರನ್ನಾಗಿ ಗುರುತಿಸಿದೆ. ಭಾರತದಲ್ಲಿ 9 ಮತ್ತು ವಿಶ್ವದಲ್ಲಿ 96ನೇ ರ‌್ಯಾಂಕ್ ನೀಡುವ ಮೂಲಕ ಡಾ. ಆರ್.ವಿ. ಕುಲಕರ್ಣಿ ಅವರು ಾರ್ಮಾಸ್ಯೂಟಿಕಲ್ ಮತ್ತು ಾಲಿಮರ್ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಕೊಂಡಾಡಿದೆ. ಈ ಇಬ್ಬರೂ ಸಾಧಕರು ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ ಎಂದರು.
ಶತಮಾನದ ಇತಿಹಾಸ ಹೊಂದಿರುವ ಬಿಎಲ್‌ಡಿಇ ಸಂಸ್ಥೆಗೆ ನಮ್ಮ ತಂದೆ ದಿ. ಬಿ.ಎಂ. ಪಾಟೀಲ ನೀಡಿರುವ ಕೊಡುಗೆ ಮತ್ತು ಇಂದು ಸಂಸ್ಥೆ ಹೆಮ್ಮರವಾಗಿ ಬೆಳೆಯಲು ಕಾರಣರಾದ ನಮ್ಮ ಸಹೋದರ ಎಂ.ಬಿ. ಪಾಟೀಲ ಅವರ ಕೊಡುಗೆ ಅಪಾರವಾಗಿದೆ. ಡಾ. ಆರ್.ಎಸ್. ಮುಧೋಳ ಮತ್ತು ಡಾ. ಆರ್.ವಿ. ಕುಲಕರ್ಣಿ ಅವರ ಸಾಧನೆ ಇಡೀ ಬಿಎಲ್‌ಡಿಇ ಸಂಸ್ಥೆಗೆ ಗೌರವ ಹೆಚ್ಚಾಗುವಂತೆ ಮಾಡಿದೆ. ಸಂಸ್ಥೆಯ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇವೆಯಿಂದಾಗಿ ಇಂದು ಬಿಎಲ್‌ಡಿಇ ವೈದ್ಯಕೀಯ ಕಾಲೇಜು ದೇಶದ 50 ಅತ್ಯುನ್ನತ ಕಾಲೇಜುಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿದ ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಎಸ್. ಮುಧೋಳ ಮಾತನಾಡಿ, ಬಿಎಲ್‌ಡಿಇ ವೈದ್ಯಕೀಯ ಕಾಲೇಜು ದೇಶದ ಅತ್ಯುನ್ನತ 50 ಕಾಲೇಜುಗಳಲ್ಲಿ ಒಂದಾಗಿದೆ. ದೇಶದ 800ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಲ್ಲಿ ನಮ್ಮ ವಿಶ್ವವಿದ್ಯಾಲಯ 200 ಸ್ಥಾನದೊಳಗಿದೆ. ವಿಶ್ವವಿದ್ಯಾಲಯ ಈಗ ನ್ಯಾಕ್ ಅಕ್ರಿಡಿಟೆಷನ್ ಪಡೆಯುವ ಹಂತದಲ್ಲಿದೆ. ಈ ಮಾನ್ಯತೆ ಸಿಕ್ಕರೆ ಆಯುರ್ವೇದ, ಾರ್ಮಸಿ ಮತ್ತು ನರ್ಸಿಂಗ್ ಕಾಲೇಜುಗಳನ್ನು ಬಿಎಲ್‌ಡಿಇ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸೇರಿಸಬಹುದು ಎಂದರು.
ಬಿಎಲ್‌ಡಿಇ ಸಂಸ್ಥೆ ಮುಖ್ಯ ಆಡಳಿತಾಧಿಕಾರಿ ಡಾ. ಆರ್.ವಿ. ಕುಲಕರ್ಣಿ ಮಾತನಾಡಿ, ಸಂಶೋಧನೆಗೆ ದೊಡ್ಡ ಪ್ರಯೋಗಾಲಯ, ಹೂಡಿಕೆ ಬೇಕಾಗಿಲ್ಲ. ಸಣ್ಣ ಕೋಣೆ ಅಥವಾ ಮನೆಯಲ್ಲಿ ಕುಳಿತು ಸಂಶೋಧನೆ ಮಾಡಬಹುದಾಗಿದೆ ಎಂದು ಅವರು ತಿಳಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಐ.ಎಸ್. ಕಾಳಪ್ಪನವರ, ಡಾ. ಮಹಾಂತೇಶ ಬಿರಾದಾರ, ಪ್ರೊ. ಎಸ್.ಎಸ್. ಲಗಳಿ, ಕೆ.ಜಿ. ಪೂಜಾರಿ, ಕೌಶಿಕ ಬ್ಯಾನರ್ಜಿ, ದೇವೇಂದ್ರ ಅಗರವಾಲ, ಅತುಲ ಆಯಿರೆ, ಸಂಜಯ ಕಡ್ಲಿಮಟ್ಟಿ, ಎ.ಎಸ್. ಪೂಜಾರ, ಆರ್.ಬಿ. ಕೊಟ್ನಾಳ, ಸೆಲೊಮನ್ ಚೊಪಡೆ, ಪ್ರಕಾಶ ಸಿದ್ದಾಪುರ, ಎಸ್.ಜೆ. ಗೌಡರ, ಡಾ. ಎಂ.ಎಸ್. ಮದಭಾವಿ ಮತ್ತಿತರರಿದ್ದರು.