ಕಾರಜೋಳ ಅಭಿಮಾನಿಗಳಿಂದ ಆಹಾರ ವಿತರಣೆ

VJP 6-2
Published on

ವಿಜಯಪುರ: ನಾಗಠಾಣ ವಿಧಾನಸಭೆ ಕ್ಷೇತ್ರದ ಬಿಜೆಪಿ ಯುವ ಮುಖಂಡ ಡಾ.ಗೋಪಾಲ ಕಾರಜೋಳ ಅವರ ಅಭಿಮಾನಿಗಳಿಂದ ಸೋಮವಾರ ನಗರದ ವಿವಿಧ ಬಡಾವಣೆಗಳ ಬಡಜನರಿಗೆ ಆಹಾರ ಸಾಮಗ್ರಿ ವಿತರಿಸಲಾಯಿತು.
ನಗರದ ಹಮಾಲ ಕಾಲನಿ, ಜಯಕರ್ನಾಟಕ ಕಾಲನಿ, ಕಾರ್ಗಿಲ್ ನಗರ, ಲಕ್ಷ್ಮಿ ನಗರ, ಕಾವಿಪ್ಲಾಟ್, ಆದರ್ಶ ನಗರ ಹತ್ತಿರದ ಎಕ್ಸಲೆಂಟ್ ಕೋಚಿಂಗ್ ಕ್ಲಾಸ್ ಬಿಲ್ಡಿಂಗ್ ಹತ್ತಿರದ ಬಡಜನರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
ಬಿಜೆಪಿ ರಾಜ್ಯ ಕೋಶಾಧ್ಯಕ್ಷ ಉಮೇಶ ಕಾರಜೋಳ, ರಾಜುಗೌಡ ಪಾಟೀಲ(ಮಹಲ್), ರವೀಂದ್ರ ಲೋಣಿ, ಜಿತೇಂದ್ರ ವಾಲಿ, ಶರತಸಿಂಗ ರಜಪೂತ, ಸತೀಶ ರೆಡ್ಡಿ, ರವಿ ಮುಖರ್ತಿಹಾಳ, ಕುಮಾರ ಕಟ್ಟಿಮನಿ, ವಿನೋದ ಮಣೂರ, ವೀರೇಶ ಗೊಬ್ಬೂರ, ಸತೀಶ ಬಾಗಿ, ಅನೀಲ ಧನಶ್ರೀ, ಮಲ್ಲು ಕೋನಳ್ಳಿ, ಬಸವರಾಜ ಶಿರಕನಹಳ್ಳಿ, ಸುನಂದಾ ಪಾಟೀಲ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net