ಏಕಮುಖ ಸಂಚಾರಿ ನಿಯಮ ತೆರವುಗೊಳಿಸಿ

vjp-12-2
Published on

ವಿಜಯಪುರ: ಏಕಮುಖ ಸಂಚಾರ ನಿಯಮ ತೆರವುಗೊಳಿಸಿ ಆಟೋ ಚಾಲಕರಿಗೆ ಅನುಕೂಲ ಕಲ್ಪಿಸಲು ಆಗ್ರಹಿಸಿ ಕಾನೂನು ರಕ್ಷಣಾ ವೇದಿಕೆ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಅಧ್ಯಕ್ಷ ದಾನಪ್ಪಗೌಡ ಚನಗೊಂಡ ಮಾತನಾಡಿ, ಬಸವೇಶ್ವರ ವೃತ್ತದಿಂದ ಶಿವಾಜಿ ವೃತ್ತದವರೆಗೆ ಆಟೋಗಳಿಗೆ ಏಕಮುಖ ರಸ್ತೆ ಘೋಷಿಸಿ ಸಂಚಾರ ನಿರ್ಬಂಧಿಸಲಾಗಿತ್ತು. ಇದರಿಂದ ಆಟೋಗಳು ಟಿಪ್ಪು ಸುಲ್ತಾನ್ ವೃತ್ತದ ಮೂಲಕ ಮತ್ತು ಶಿವಾಜಿ ವೃತ್ತದಿಂದ ಬಸವೇಶ್ವರ ವೃತ್ತಕ್ಕೆ ಬರಲು ಹುತಾತ್ಮ ವೃತ್ತದ ಮಾರ್ಗ ಗುರುತಿಸಲಾಗಿತ್ತು. ಆದರೆ ಸದರಿ ಮಾರ್ಗಗಳು ಸಂಪೂರ್ಣ ಗುಂಡಿಗಳಿಂದ ಆವೃತ್ತಗೊಂಡಿವೆ. ಹೀಗಾಗಿ ಆಟೋ ಚಾಲಕರಿಗೆ ಮತ್ತು ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಕೂಡಲೇ ಸದರಿ ಮಾರ್ಗ ಬದಲಾವಣೆ ಮಾಡಬೇಕೆಂದರಲ್ಲದೆ, ರಸ್ತೆ ದುರಸ್ತಿಗೂ ಆಗ್ರಹಿಸಿದರು.

ಕೃಷ್ಣಾ ಜಾಧವ, ಪ್ರಕಾಶ ನಿರಂಜನ, ವಿನೋದ ಕಾವಿ, ಯಶವಂತ ಪಾಂಡು, ಲತಿ ಮನವಳ್ಳಿ, ಸಂತೋಷ ಜಾಧವ, ಸೇವಾಲಾಲ ಜಾಧವ, ಕಾಶಿನಾಥ ಜಾಧವ, ಕಿಶನ್ ಚವಾಣ್, ಅನಿಲ ರಾಠೋಡ, ರಾಜು ಕೊಡಗಾನೂರ, ಕುಮಾರ ಬಡಿಗೇರ, ಸಿ.ಎಸ್. ಶೇಡಶ್ಯಾಳ, ಎ.ಪಿ. ಪವಾರ, ಎಸ್.ಬಿ. ಪವಾರ, ಅಕ್ಷಯ ಜಾಧವ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net