

ವಿಜಯಪುರ: ಅಡುಗೆ ಅನಿಲ ದರ ಏರಿಕೆ, ಧರ್ಮಾಧಾರಿತ ಪೌರತ್ವ ಕಾಯ್ದೆ ವಿರೋಧಿಸಿ ಶುಕ್ರವಾರ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮೆರವಣಿಗೆ ಮೂಲಕ ಜಿಲ್ಲಾಡಳಿತ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಪ್ರೊ.ರಾಜು ಆಲಗೂರ ಮಾತನಾಡಿ, ಬಿಜೆಪಿ ಸರ್ಕಾರ ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿದೆ. ಶೋಷಿತರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಮೀಸಲಾತಿಯನ್ನು ಹಂತ ಹಂತವಾಗಿ ಹತ್ತಿಕ್ಕುತ್ತಿರುವ ಬಿಜೆಪಿ ಸಿಎಎ, ಎನ್‌ಪಿಆರ್ ಮತ್ತು ಎನ್‌ಆರ್‌ಸಿ ಕಾಯ್ದೆ ಮೂಲಕ ಅಲ್ಪಸಂಖ್ಯಾತರನ್ನು ಹತ್ತಿಕ್ಕುವ ಪ್ರಯತ್ನ ನಡೆಸಿದೆ. ಧರ್ಮ ಮತ್ತು ಜಾತಿ ಆಧಾರದ ಮೇಲೆ ಒಡೆದು ಆಳುತ್ತಿರುವ ಮೋದಿ ಸರ್ಕಾರಕ್ಕೆ ದೆಹಲಿ ಜನ ವಿಧಾನಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದಾರೆ. ಮುಂದಿನ ದಿನಗಳಲ್ಲಿ ದೇಶಾದ್ಯಂತ ಪಾಠ ಕಲಿಸುವರೆಂದು ತಿಳಿಸಿದರು.
ನಾಗಠಾಣ ಮತಕ್ಷೇತ್ರದ ಮಾಜಿ ಶಾಸಕ ವಿಠಲ ಕಟಕಧೋಂಡ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 6 ವರ್ಷಗಳಾದರೂ ಏನೂ ಪ್ರಯೋಜನವಾಗಿಲ್ಲ. ತಪ್ಪು ಆರ್ಥಿಕ ನೀತಿ, ಸಂವಿಧಾನ ವಿರೋಧಿ ಕಾನೂನುಗಳನ್ನು ರಚಿಸಿ ಈ ದೇಶವನ್ನು ತಪ್ಪು ದಾರಿಗೆ ಎಳೆಯುತ್ತಿದೆ ಎಂದರು.
ಮುಖಂಡರಾದ ಮಹ್ಮದ್‌ರಫೀಕ್ ಟಪಾಲ, ಕಾಂತಾ ನಾಯಕ, ವೈಜನಾಥ ಕರ್ಪೂರಮಠ, ಮಹಾದೇವಿ ಗೋಕಾಕ ಮಾತನಾಡಿದರು.
ವಿಶ್ವನಾಥ ಮಠ, ಚಾಂದಸಾಬ ಗಡಗಲಾವ, ಸುಭಾಷ ತಳಕೇರಿ, ಎಸ್.ಎಂ.ಪಾಟೀಲ(ಗಣಿಹಾರ), ಜಮೀರ್‌ಅಹ್ಮದ್ ಬಕ್ಷೀ, ಜಮೀರ್‌ಅಹ್ಮದ್ ಬಾಗಲಕೋಟ, ಬಾಳನಗೌಡ ಪಾಟೀಲ, ಸಾಹೇಬಗೌಡ ಬಿರಾದಾರ, ಗಂಗಾಧರ ಸಂಬಣ್ಣಿ, ವಿಜಯಕುಮಾರ ಘಾಟಗೆ, ರ್ಇಾನ್ ಶೇಖ, ಬಡೇಪೀರ ಜುನೇದಿ, ಅಬ್ದುಲ್‌ಖಾದರ್ ಖಾದಿಮ್, ಅಬ್ದುಲ್‌ರಜಾಕ್ ಹೊರ್ತಿ, ವಸಂತ ಹೊನಮೊಡೆ, ಚನ್ನಬಸಪ್ಪ ನಂದರಗಿ, ಮಲ್ಲು ತೊರವಿ, ಲಕ್ಷ್ಮಿ ದೇಸಾಯಿ, ಶರಣಪ್ಪ ಯಕ್ಕುಂಡಿ, ಈರಪ್ಪ ಜಕ್ಕಣ್ಣನವರ, ಮಲ್ಲನಗೌಡ ಬಿರಾದಾರ, ರಾಜೇಶ್ವರಿ ಚೋಳಕೆ, ಭಾರತಿ ನಾವಿ, ಮಂಜುಳಾ ಗಾಯಕವಾಡ, ಬಾಬು ಯಾಳವಾರ, ಅಶೋಕ ಪಾಟೀಲ, ಪರಶುರಾಮ ಪಡಗಾರ, ಸಂಜು ತೊರವಿ, ಲಕ್ಷ್ಮಿ ಶಿವಣಗಿ ಮತ್ತಿತರರಿದ್ದರು.