ಮಾಧ್ಯಮಗಳ ಮೇಲೆ ಸರ್ಕಾರದ ನಿಯಂತ್ರಣ ಸಲ್ಲದು

VJP 30-1
Published on

ವಿಜಯಪುರ: ಖಾಸಗಿ ಸುದ್ದಿ ವಾಹಿನಿ ಮೇಲೆ ನಿಷೇಧ ಹೇರಿರುವ ಸರ್ಕಾರದ ಕ್ರಮ ಖಂಡಿಸಿ ಜೈ ಭೀಮಸೇನಾ ರಾಜ್ಯ ಸಂಘರ್ಷ ಸಮಿತಿ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ರಾಜ್ಯ ಸಂಚಾಲಕ ಸಂತೋಷ ಭಾಸ್ಕರ್ ಮಾತನಾಡಿ, ಅಭಿವ್ಯಕ್ತಿ ಸ್ವಾತಂತ್ರೃದ ಮೇಲೆ ರಾಜ್ಯ ಸರ್ಕಾರದ ದಮನಕಾರಿ ನೀತಿಯನ್ನು ಖಂಡಿಸುತ್ತೇವೆ. ಖಾಸಗಿ ಕನ್ನಡ ಸುದ್ದಿ ವಾಹಿನಿಯ ಲೈವ್ ಬಂದ್‌ಮಾಡಿರುವುದು ಸರಿಯಾದ ಕ್ರಮ ಅಲ್ಲ. ಇದೇ ಟಿವಿ ವಾಹಿನಿ ಮಾಲೀಕರ ಮೇಲೆ ಆರೋಪ ಮಾಡಿರುವುದು ಬೇರೆ ವಿಚಾರ. ಆ ಕುರಿತು ತನಿಖೆ ನಡೆಸುವುದಕ್ಕೆ ಅಭ್ಯಂತರವಿಲ್ಲ. ಆದರೆ ಒಂದು ಟಿವಿ ವಾಹಿನಿ ಲೈವ್ ಬಂದ್ ಮಾಡುವುದರಿಂದ ಅದನ್ನೇ ಅವಲಂಬಿಸಿ ವೃತ್ತಿ ಮಾಡುತ್ತಿರುವ ನೂರಾರು ಪತ್ರಕರ್ತರ ಕುಟುಂಬಗಳು ಬೀದಿಗೆ ಬರುತ್ತವೆ. ಕೂಡಲೇ ಈ ಕುರಿತು ತನಿಖೆ ನಡೆಸಿ ಸಂಬಂಧಿಸಿದವರ ಮೇಲೆ ಸೂಕ್ತ ಕ್ರಮ ಕೈಗೊಂಡು ಬೀದಿಗೆ ಬಿದ್ದ ಪತ್ರಕರ್ತರಿಗಾದ ಹಾನಿ ಭರಿಸುವಲ್ಲಿ ಸರ್ಕಾರ ಮುಂದಾಗಬೇಕು ಎಂದರು.
ಗೌರವ ಅಧ್ಯಕ್ಷ ಬಸವರಾಜ ಲಗಳಿ, ದಲಿತ ಮುಖಂಡ ಸುನೀಲ ಹೊಸಹಳ್ಳಿ ಮಾತನಾಡಿ ಸರ್ಕಾರದ ಧೋರಣೆ ಖಂಡಿಸಿದರು.
ನಜೀರ ಅಹ್ಮದ ಗುಲ್ಬರ್ಗಾ, ಪ್ರಭು ಧನ್ಯಾಳ, ಯಾಜ್ ಜಮಾದಾರ, ಭೂಪೇಶ ಲಿಂಬೂಡಕರ, ಬಸವರಾಜ ನಾಯ್ಕೋಡಿ, ಭೀಮರಾವ್ ಅಹಿರಸಂಘ, ಅನೀಲ ನಾಯ್ಕೋಡಿ, ಅಭಿಮನ್ಯು ಕಾಲೇಬಾಗ, ಮೀನಾಕ್ಷಿ ಕಾಲೇಬಾಗ ಮತ್ತಿತರರಿದ್ದರು.

ಕಾನಿಪದಿಂದ ಮನವಿ

ಖಾಸಗಿ ವಾಹಿನಿಯೊಂದರ ಪತ್ರಕರ್ತರ ಬದುಕು ಬೀದಿಗೆ ಬೀಳುವಂತೆ ಮಾಡಿರುವ ಸರ್ಕಾರದ ಕ್ರಮ ಖಂಡಿಸಿ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅವರಿಗೆ ಮನವಿ ಸಲ್ಲಿಸಿದ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಕೂಡಲೇ ಪತ್ರಕರ್ತರ ನೆರವಿಗೆ ಧಾವಿಸಲು ವಿನಂತಿಸಿದರು.
ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮ ಸೇರಿದಂತೆ ಸ್ಥಳೀಯ ವಾಹಿನಿಗಳ ಪತ್ರಕರ್ತರು ಕಾನಿಪಕ್ಕೆ ಬೆಂಬಲ ನೀಡಿದರು. ಪತ್ರಕರ್ತರಾದ ಫಿರೋಜ್ ರೋಜಿಂದಾರ, ದೇವೇಂದ್ರ ಹೆಳವರ, ವಿಜಯಕುಮಾರ ಸಾರವಾಡ, ಸುನೀಲ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net