ಮಹಾತ್ಮರ ತತ್ವಾದರ್ಶ ಅಳವಡಿಸಿಕೊಳ್ಳಿ

VJP 2-1
Published on

ವಿಜಯಪುರ: ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರೀಜಿ ಅವರ ಮೌಲ್ಯಗಳು ಮತ್ತು ತತ್ವಾದರ್ಶಗಳನ್ನು ಅಳವಡಿಸಿಕೊಳ್ಳುವ ಜತೆಗೆ ನವ ಪೀಳಿಗೆಗೆ ತಿಳಿಸಿಕೊಡೋಣ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಹೇಳಿದರು. ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್‌ಬಹಾದೂರ್ ಶಾಸ್ತ್ರೀಜಿ ಅವರ ಜಯಂತಿ ನಿಮಿತ್ತ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಸಮಾಜದಲ್ಲಿಂದು ಮಕ್ಕಳನ್ನು ಆದರ್ಶರನ್ನಾಗಿ ಮಾಡಲು ಮಹಾತ್ಮರ ತತ್ವಾದರ್ಶಗಳು ಅತ್ಯಂತ ಸಹಕಾರಿಯಾಗಿದ್ದು, ಪಾಲಕರೆಲ್ಲರೂ ಇಂದಿನ ನವ ಪೀಳಿಗೆಗೆ ಎಲ್ಲ ಮಹನೀಯರ ಮೌಲ್ಯಗಳನ್ನು ತಿಳಿಹೇಳುವ ಶಿಕ್ಷಕರಂತಾಗಬೇಕೆಂದು ಅವರು ಮನವಿ ಮಾಡಿದರು. ಮಹಾತ್ಮರ ಜಯಂತಿಗಳು ಅರ್ಥಪೂರ್ಣವಾಗಲು ನವ ಪೀಳಿಗೆಗೆ ಮಾರ್ಗದರ್ಶನ ಮತ್ತು ದಾರಿ ತೋರುವ ಕಾರ್ಯವಾಗಬೇಕು. ಮಹಾತ್ಮ ಗಾಂಧೀಜಿ, ಲಾಲ್ ಬಹದೂರ್ ಶಾಸೀಜಿ ಸೇರಿ ಅನೇಕ ಮಹನಿಯರ ಜಯಂತಿಗಳನ್ನು ಪ್ರತಿ ವರ್ಷ ಆಚರಿಸುವ ಮೂಲಕ ಅವರ ಆದರ್ಶಗಳನ್ನು ಸ್ಮರಿಸಲಾಗುತ್ತಿದೆ. ಅವರು ನೀಡಿರುವಂತಹ ಮೌಲ್ಯಾಧಾರಿತ ತತ್ವಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿದ್ದು, ಅಹಿಂಸೆ ಸೇರಿ ಆದರ್ಶ ತತ್ವಗಳನ್ನು ಪ್ರತಿಯೊಬ್ಬರೂ ಪರಿಪಾಲಿಸಿದಾಗ ಮಾತ್ರ ಅವರ ಜಯಂತಿಗಳ ಆಚರಣೆಗೆ ಒಂದು ಅರ್ಥಪೂರ್ಣತೆ ಸಿಕ್ಕಂತಾಗುತ್ತದೆ ಎಂದರು.

ಕರೊನಾ ಕುರಿತು ಎಚ್ಚರ ವಹಿಸಿ

ಕರೊನಾ ಹಿನ್ನೆಲೆ ಮಹಾತ್ಮರ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದೆ. ಸಾರ್ವಜನಿಕರು ಕರೊನಾ ಬಗ್ಗೆ ಮುಂಜಾಗೃತೆ ವಹಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಗುಂಪುಗೂಡದೆ ಪರಸ್ಪರ ಅಂತರ ಕಾಯ್ದುಕೊಳ್ಳಬೇಕೆಂದರು.

ಕುಮಾರಿ ಮಂಜುಳಾ ಪ್ರಾರ್ಥಿಸಿದರು. ಸೇವಾದಳದ ಪ್ರತಿನಿಧಿಗಳು ಗಾಂಧಿ ಭಕ್ತಿ ಗೀತೆ, ಭಜನೆಗಳನ್ನು ಹಾಡಿದರು. ಪಾಲಿಕೆ ಆಯುಕ್ತ ಶ್ರೀಹರ್ಷಾ ಶೆಟ್ಟಿ, ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ತಹಸೀಲ್ದಾರ್ ಮೋಹನ್‌ಕುಮಾರಿ, ಖಾದಿ ಗ್ರಾಮೋದ್ಯೋಗ ಸಂಘದ ಅಧ್ಯಕ್ಷ ಬಿ.ಬಿ. ಪಾಟೀಲ, ಖಾದಿ ಗ್ರಾಮೋದ್ಯೋಗ ಅಧಿಕಾರಿ ದಳವಾಯಿ, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ನಗರದ ಗಾಂಧಿ ವೃತ್ತದಲ್ಲಿರುವ ಪುತ್ಥಳಿಗೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, ಪಾಲಿಕೆ ಆಯುಕ್ತ ಶ್ರೀಹರ್ಷಾ ಶಟ್ಟಿ, ಖಾದಿ ಗ್ರಾಮೋದ್ಯೋಗ ಸಂಘದ ಅಧ್ಯಕ್ಷ ಬಿ.ಬಿ. ಪಾಟೀಲ, ಮುಖಂಡರಾದ ರಿಯಾಝ್ ಾರೂಕ್ ಮಾಲಾರ್ಪಣೆ ಮಾಡಿ ಗೌರವ ಅರ್ಪಿಸಿರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net