ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

VJP 19-1
Published on

ವಿಜಯಪುರ: ರಾಜ್ಯ ಸರ್ಕಾರದ ವಿದ್ಯುತ್ ಬೆಲೆ ಏರಿಕೆ ನೀತಿ ಖಂಡಿಸಿ ಗುರುವಾರ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಡಳಿತ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ನಗರದ ಜಿಲ್ಲಾಡಳಿತ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಅಧ್ಯಕ್ಷ ರಾಜು ಆಲಗೂರ ಮಾತನಾಡಿ, ಮಹಾಮಾರಿ ಕರೊನಾ ಹೊಡೆತಕ್ಕೆ ಇಡೀ ದೇಶವೇ ತಲ್ಲಣಗೊಂಡಿದೆ. ಜನ ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿದ್ದಾರೆ. ನಿರುದ್ಯೋಗ ತಾಂಡವಾಡುತ್ತಿದೆ. ಜನ ಹತಾಶಗೊಂಡಿದ್ದಾರೆ. ಇಂಥ ಸಂದರ್ಭದಲ್ಲೇ ಸರ್ಕಾರ ವಿದ್ಯುತ್ ದರ ಹೆಚ್ಚಿಸಿರುವುದು ಖಂಡನೀಯ ಎಂದರು.

ಮುಖಂಡರಾದ ಹಮೀದ್ ಮುಶ್ರೀಫ್, ಹಾಸಿಂಪೀರ ವಾಲಿಕಾರ, ಎಂ.ಎಂ. ಸುತಾರ ಜೋತಿರಾಮ ಪವಾರ, ಆಜಾದ ಪಟೇಲ, ಚಾಂದಸಾಬ ಗಡಗಲಾವ, ವಿಶ್ವನಾಥ ಮಠ, ಮಹ್ಮಮದ್ ರಫೀಕ ಟಪಾಲ, ಜಮೀರಅಹ್ಮದ್ ಬಕ್ಷಿ, ಅಬ್ದುಲ್ ಖಾದರ ಖಾದಿಮ, ಜಮೀರಅಹ್ಮದ್ ಬಾಗಲಕೋಟ, ಉಸ್ಮಾನ ಪಟೇಲ, ಸಾಹೇಬಗೌಡ ಬಿರಾದಾರ, ಬಾಳನಗೌಡ ಪಾಟೀಲ, ಪೀರಪ್ಪ ನಡುವಿನಮನಿ, ವಸಂತ ಹೊನಮೊಡೆ, ಮಲ್ಲನಗೌಡ ಬಿರಾದಾರ, ಚನ್ನಬಸಪ್ಪ ನಂದರಗಿ, ಬಿ.ಎಸ್. ಬ್ಯಾಳಿ, ಸುರೇಂದ್ರ ಭಾವಿಮನಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net