ಕೇಂದ್ರ ಸರ್ಕಾರ ಬೇಡಿಕೆಗಳಿಗೆ ಸ್ಪಂದಿಸಲಿ

VJP 17-2
Published on

ವಿಜಯಪುರ: ದೇಶವ್ಯಾಪಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ಬಿಜಾಪುರ ನಗರ ಸ್ಲಂ ಅಭಿವೃದ್ಧಿ ಸಮಿತಿ ಒಕ್ಕೂಟ, ಸ್ಲಂ ಮಹಿಳಾ ಸ್ವ- ಸಹಾಯ ಸಂಘಗಳ ಒಕ್ಕೂಟ ಹಾಗೂ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಪದಾಧಿಕಾರಿಗಳು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರೈತರ ಬೇಡಿಕೆಗಳನ್ನು ತ್ವರಿತವಾಗಿ ಈಡೇರಿಸಲು ಆಗ್ರಹಿಸಿದರು. ಬಳಿಕ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ನೇತೃತ್ವ ವಹಿಸಿದ್ದ ಅಕ್ರಂ ಮಾಶ್ಯಾಳಕರ ಮಾತನಾಡಿ, ಕೇಂದ್ರ ಸರ್ಕಾರ ರೈತರ ಹಿತ ಕಡೆಗಣಿಸಿದೆ. ಕಾರ್ಪೋರೇಟರ್ ಪರ ಆಡಳಿತ ನಡೆಸುತ್ತಿದೆ. ರೈತರು ಹೋರಾಟ ನಡೆಸುತ್ತಿದ್ದರೂ ಸ್ಪಂದಿಸುತ್ತಿಲ್ಲ. ಇನ್ನಾದರೂ ರೈತರ ಬೇಡಿಕೆ ಈಡೇರಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದರು.

ಪ್ರಗತಿಪರ ಸಂಘಟನೆ ಸದಸ್ಯ ಶ್ರೀನಾಥ ಪೂಜಾರಿ ಮಾತನಾಡಿ, ಬೀದಿಯಲ್ಲಿ ಚಳಿ, ಗಾಳಿ ಲೆಕ್ಕಿಸದೆ ರೈತರು ಹೋರಾಟ ನಡೆಸುತ್ತಿದ್ದರೂ ಕಾಣಿಸುವುದಿಲ್ಲ. ಸರ್ಕಾರಕ್ಕೆ ಬಂಡವಾಳಶಾಹಿಗಳ ಹಿತವೇ ಮುಖ್ಯವಾಗಿದೆ ಎಂದರು.

ಾದರ್ ಅಂತೋನಿದಾಸ್, ರ್ಜಾನಾ ಜಮಾದಾರ, ಚಂದ್ರಶೇಖರ ಆಲಮೇಲಕರ, ಮೀನಾಕ್ಷಿ ಕಾಲೇಬಾಗ, ನಿರ್ಮಲಾ ಹೊಸಮನಿ, ಬಿ.ಭಗವಾನ ರೆಡ್ಡಿ, ರ್ಇಾನ್ ಶೇಖ, ಸುಭಾಷ್ ನಾಟೀಕಾರ, ವಿ.ಎ. ಪಾಟೀಲ, ಕಾವೇರಿ ಭರತಕುಮಾರ, ಸದಾನಂದ ಮೋದಿ, ರಫೀಕ ಮನಗೂಳಿ, ಸಿಸ್ಟರ್ ಅಮಲಾ, ಫಯಾಜ್ ಕಲಾದಗಿ, ರಮೇಶ ಹೊನಮೋರೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net