ವೈದ್ಯಕೀಯ ಪರೀಕ್ಷೆ ಮುಂದೂಡಲು ಆಗ್ರಹ

VJP_Protest
Published on

ವಿಜಯಪುರ: ರಾಜೀವ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ ವಿವಿ ವೈದ್ಯಕೀಯ ಪರೀಕ್ಷೆ ಮುಂದೂಡಲು ಆಗ್ರಹಿಸಿ ಎಐಡಿಎಸ್‌ಒ ನೇತೃತ್ವ ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟಿಸಿದರು.

ಜ. 19 ರಿಂದ ನಡೆಸಲು ಉದ್ದೇಶಿಸಿರುವ ಪರೀಕ್ಷೆಗಳನ್ನು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮುಂದೂಡಬೇಕೆಂದು ಜಿಲ್ಲಾಡಳಿತ ಮೂಲಕ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.

ನೇತೃತ್ವ ವಹಿಸಿದ್ದ ಎಚ್.ಟಿ. ಭರತಕುಮಾರ ಮಾತನಾಡಿ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಡಿ.1ರಿಂದ ಕಾಲೇಜು ಆರಂಭಿಸುವುದಾಗಿ ತಿಳಿಸಿದ್ದಾರೆ. ಆದರೆ, 8 ತಿಂಗಳಿಂದ ದೇಶದೆಲ್ಲೆಡೆ ಜನಸಾಮಾನ್ಯರು, ವಿದ್ಯಾರ್ಥಿಗಳು ಕರೊನಾ ಸಾಂಕ್ರಾಮಿಕ ಕಾಯಿಲೆಗೆ ತುತ್ತಾಗಿ ತೀವ್ರತರ ತೊಂದರೆ ಅನುಭವಿಸುತ್ತಿದ್ದಾರೆ. ಆಫ್‌ಲೈನ್ ತರಗತಿ ಪುನರಾರಂಭಿಸುವುದು ಖಂಡನೀಯ ಎಂದರು.

ಸಚಿವರ ಹೇಳಿಕೆ ಬೆನ್ನಲ್ಲೇ ರಾಜೀವ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ ತನ್ನ ಸುತ್ತೋಲೆಯಲ್ಲಿ ಜ. 19 ರಿಂದ ವೈದ್ಯಕೀಯ ಪರೀಕ್ಷೆ ನಡೆಸಲು ತೀರ್ಮಾನಿಸಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಒಂದೂವರೆ ತಿಂಗಳಲ್ಲಿ ವೈದ್ಯಕೀಯ ಪರೀಕ್ಷೆಗೆ ಸಿದ್ಧತೆ ನಡೆಸಿ ಬರೆಯುವುದು ಅಸಾಧ್ಯ ಮತ್ತು ಅವಾಸ್ತವಿಕ. ಆನ್‌ಲೈನ್ ಪದ್ಧತಿಯಿಂದ ವಿದ್ಯಾರ್ಥಿಗಳಿಗೆ ಸಮರ್ಪಕ ಜ್ಞಾನ ಸಿಕ್ಕಿಲ್ಲ. ಇಂಟರ್‌ನೆಟ್ ಮತ್ತು ಇತರ ಸೌಲಭ್ಯಗಳ ಕೊರತೆಯಿಂದ ವಿಶ್ವವಿದ್ಯಾಲಯ ನಡೆಸಿದ ಆನ್‌ಲೈನ್ ತರಗತಿಗಳು ಲಪ್ರದವಾಗಿಲ್ಲ. ಅದಕ್ಕಿಂತ ಹೆಚ್ಚಾಗಿ, ಪ್ರಾಯೋಗಿಕ ತರಗತಿ, ಕ್ಲಿನಿಕಲ್ ತರಬೇತಿ ಕ್ರಮಗಳ ಮೇಲೆ ಆಧಾರವಾಗಿರುವ ವೈದ್ಯಕೀಯ ಕೋರ್ಸ್‌ನಲ್ಲಿ ಈವರೆಗೆ ಯಾವುದೇ ತರಗತಿ ನಡೆದಿಲ್ಲ ಮತ್ತು ಒಂದೂವರೆ ತಿಂಗಳಲ್ಲಿ ಅದು ನಿಯೋಜಿತ ಮಟ್ಟ ತಲುಪುವುದು ಅಸಾಧ್ಯವಾಗಿದೆ. ಉದ್ದೇಶಿತ ಪರೀಕ್ಷೆಯನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು.

ಎಐಡಿಎಸ್‌ಒ ಜಿಲ್ಲಾ ಉಪಾಧ್ಯಕ್ಷೆ ಕಾವೇರಿ ರಜಪೂತ ಮಾತನಾಡಿ, ಜನವರಿ ತಿಂಗಳಲ್ಲಿ ನಡೆಯಬೇಕಿರುವ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ಒತ್ತಾಯಿಸಿದರು.

ದರ್ಶನಗೌಡ ಎ., ಖಾದಿರ್ ಅಹಮದ್ ಖಾನ್, ಗಣೇಶ, ಅಬ್ದುಲ್ ರೆಹಮಾನ್, ವಸಾಯ್ಿ ಖಾನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net