

ವಿಜಯಪುರ: ಬದಲಾಗುತ್ತಿರುವ ಸಹಕಾರಿ ಸಂಘಗಳ ಕಾಯ್ದೆಗಳ ಬಗ್ಗೆ ಪಿಕೆಪಿಎಸ್ ಅಧ್ಯಕ್ಷರು, ಸದಸ್ಯರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿದುಕೊಳ್ಳುವುದು ಅತ್ಯವಶ್ಯಕ ಎಂದು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ ಹೇಳಿದರು.
ನಗರದ ಡಿಸಿಸಿ ಬ್ಯಾಂಕ್‌ನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಹಕಾರ ಸಂಘಗಳ ಕಾಯ್ದೆ, ಸಾಲ ಧೋರಣೆ ಹಾಗೂ ಸಮರ್ಪಕ ಕಾರ್ಯನಿರ್ವಹಣೆ ಕುರಿತು ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಂ.ಜಿ. ಪಾಟೀಲ ಮಾತನಾಡಿ, ಇತ್ತೀಚೆಗೆ ಬದಲಾಗುತ್ತಿರುವ ಸಹಕಾರ ಸಂಘಗಳ ಕಾಯ್ದೆಗಳ ಬಗ್ಗೆ ತಿಳಿಸಿದರು. ಕೆ.ಬಿ. ರಾಜಣ್ಣ ಬ್ಯಾಂಕಿನಿಂದ ಸಿಗುವ ಸೌಲಭ್ಯಗಳ ಕುರಿತು ಮಾತನಾಡಿದರು. ಆರ್.ಎಂ. ಬಣಗಾರ ತರಬೇತಿ ಸಂಯೋಜಕ ರೈತರಿಗೆ ಸಿಗುವ ವಿವಿಧ ವಿಮಾ ಸೌಲಭ್ಯಗಳ ಕುರಿತು ವಿವರಿಸಿದರು.
ಎಪಿಎಂಸಿ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶಗೌಡ ಬಿರಾದಾರ, ಸಂಯುಕ್ತಾ ಪಾಟೀಲ, ಜಿ.ಬಿ. ನಿಡೋಣಿ, ಸಲಹೆಗಾರ ಜೆ.ಕೊಟ್ರೇಶಿ ಉಪಸ್ಥಿತರಿದ್ದರು ತಾಲೂಕಿನ 59 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪಾಲ್ಗೊಂಡಿದ್ದರು.
ಡಿಜಿಎಂ ಸತೀಶ ಪಾಟೀಲ ಸ್ವಾಗತಿಸಿದರು. ಚನ್ನಪ್ಪ ಕೊಪ್ಪದ ವಂದಿಸಿದರು.