ಫಲಾನುಭವಿಗಳಿಗೆ ಪರಿಹಾರ ವಿತರಿಸಿ

VMS 1-3
Published on

ವಿಜಯಪುರ: ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ಘೋಷಣೆ ಮಾಡಿರುವ ಕ್ಷೌರಿಕ ವೃತ್ತಿದಾರರಿಗೆ 5 ಸಾವಿರ ರೂ. ಪರಿಹಾರಧನ ನೀಡುವಂತೆ ಜಿಲ್ಲಾಧ್ಯಕ್ಷ ಬಸವರಾಜ ಶಿವಶರಣರ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲರಿಗೆ ಮನವಿ ಸಲ್ಲಿಸಿದರು.
ಕ್ಷೌರಿಕ ವೃತ್ತಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ನಮ್ಮ ಸಮಾಜದ ಜನರು ಲಾಕ್‌ಡೌನ್‌ದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕ್ಷೌರಿಕರ ಸಮಸ್ಯೆ ಅರಿತು ಮುಖ್ಯಮಂತ್ರಿ ಯಡಿಯೂರಪ್ಪ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದರೂ ಅದು ಸೂಕ್ತ ಸಮಯಕ್ಕೆ ಬರುತ್ತಿಲ್ಲ. ಹೀಗಾಗಿ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿಗೆ ಅಲೆದಾಡುವಂತಾಗಿದೆ. ಕೂಡಲೇ ತಾವು ಕಾರ್ಯಪ್ರವೃತ್ತರಾಗಿ ಪರಿಹಾರ ಪ್ಯಾಕೇಜ್‌ನ್ನು ಫಲಾನುಭವಿಗಳಿಗೆ ಆಯಾ ಜಿಲ್ಲಾಧ್ಯಕ್ಷರ ಮೂಲಕ ವಿತರಿಸಿ ನೆರವು ಕಲ್ಪಿಸಬೇಕೆಂದು ಶಿವಶರಣರ ಮನವಿ ಮಾಡಿದರು.
ಕಾರ್ಯದರ್ಶಿ ಶಿವಾನಂದ ನಾವಿ, ಸಮಾಜದ ಮುಖಂಡರಾದ ಜಿ.ಎಸ್. ಹೊಸಟ್ಟಿ, ವಿಠಲ ನಾವಿ, ವಿರುಪಾಕ್ಷಿ ಕತ್ನಳ್ಳಿ, ಅಶೋಕ ನಾವಿ, ನರಸು ಜುಮನಾಳ, ರಮೇಶ ಇಲಕಲ್, ಚಿದಾನಂದ ತೊರವಿ, ಮಲ್ಲು ಕವಲಗಿ, ಬಸು ಬಿಸನಾಳ, ಸಿದ್ದಣ್ಣ ಹಡಪದ, ಚಂದ್ರಕಾಂತ ಹಡಪದ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net