ನಗರ ಪ್ರದೇಶಕ್ಕೂ ಉದ್ಯೋಗಖಾತ್ರಿ ಯೋಜನೆ ವಿಸ್ತರಿಸಿ

VMS 30-2
Published on

ವಿಜಯಪುರ: ಲಾಕ್‌ಡೌನ್‌ದಿಂದ ಸಂಕಷ್ಟಕ್ಕೆ ಸಿಲುಕಿರುವ ನಗರ ಪ್ರದೇಶದ ಸ್ಲಂ ವಾಸಿಗಳಿಗೂ ಉದ್ಯೋಗ ಖಾತ್ರಿ ಯೋಜನೆ ವಿಸ್ತರಿಸಬೇಕೆಂದು ವಿಜಯಪುರ ನಗರ ಸ್ಲಂ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.
ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಕೈಗೊಂಡ ಲಾಕ್‌ಡೌನ್‌ದಿಂದ ಅನೇಕರು ಉದ್ಯೋಗವಿಲ್ಲದೇ ಒಂದೊತ್ತು ಊಟಕ್ಕೂ ಪರದಾಡುವ ಸ್ಥಿತಿ ಬಂದೊದಗಿದೆ. ಜಿಲ್ಲೆಯ ಬಡ ಹಾಗೂ ಮಧ್ಯಮ ವರ್ಗದ ಜನರ ಸ್ಥಿತಿಗತಿ ಗಂಭೀರವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಖಾತ್ರಿ ಯೋಜನೆ ಜಾರಿಯಲ್ಲಿದ್ದು, ಆ ಯೋಜನೆ ನಗರ ಪ್ರದೇಶದ ಬಡ ಜನರಿಗೂ ವಿಸ್ತರಿಸಿದರೆ ಕೋವಿಡ್ ಸಂದರ್ಭದಲ್ಲಿ ಅವರ ಉಪ ಜೀವನಕ್ಕೆ ನೆರವಾಗುತ್ತದೆ ಎಂದು ಹೇಳಿದರು.
ಅಕ್ರಂ ಮಾಶ್ಯಾಳಕರ, ದಸ್ತಗೀರ್ ಉಕ್ಕಲಿ, ರಫೀಕ್ ಮನಗೂಳಿ, ದಾನಪ್ಪ ಸೂರಗೊಂಡ, ಸಿದ್ದಲಿಂಗಯ್ಯ ಹಿರೇಮಠ, ಶೋಭಾ ಗಾಯಕವಾಡ, ಚಂದ್ರಶೇಖರ ಆಲಮೇಲಕರ, ಕೃಷ್ಣ ಜಾಧವ, ರೇಷ್ಮಾ ಪಡಗಾನೂರ, ಅಬ್ದುಲ್‌ರಜಾಕ್ ತುರ್ಕಿ ಮತ್ತಿತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net