ವಿಶ್ವ ಸೈಕ್ಲಿಂಗ್ ದಿನಾಚರಣೆ

HN 3-2
Published on

ವಿಜಯಪುರ: ನಗರದಲ್ಲಿ ಸೈಕ್ಲಿಂಗ್ ಕ್ರೀಡಾನಿಲಯದ ಆವರಣದಲ್ಲಿ ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಸಂಸ್ಥೆ ವತಿಯಿಂದ ಬುಧವಾರ ವಿಶ್ವ ಸೈಕ್ಲಿಂಗ್ ದಿನವನ್ನು ಅತ್ಯಂತ ಸರಳ ರೀತಿಯಲ್ಲಿ ಆಚರಿಸಲಾಯಿತು.

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಜಿ.ಎಸ್.ಲೋಣಿ ಮತ್ತು ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಸಂಸ್ಥೆ ಅಧ್ಯಕ್ಷ ರಾಜು ಬಿರಾದಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಅನೇಕ ಅಂತಾರಾಷ್ಟ್ರೀಯ, ರಾಷ್ಟ್ರೀಯ, ಸೈಕ್ಲಿಂಗ್ ಕ್ರೀಡಾಪಟುಗಳು ಭಾಗವಹಿಸಿದ್ದರು. ಸೈಕ್ಲಿಂಗ್ ಸಂಸ್ಥೆ ಪದಾಧಿಕಾರಿಗಳಾದ ಮಂಜುನಾಥ ರಾಠೋಡ, ಸಂಜು ಪಡ್ತಾರೆ, ಸುರೇಂದ್ರ ಠಾಕೂರ್, ಸಂತೋಷ್ ಕತಕನಹಳ್ಳಿ, ಶ್ರೀಕಾಂತ ಮಠ, ಸೈಕ್ಲಿಂಗ್ ತರಬೇತುದಾರರಾದ ಅಲ್ಕಾ ಪಡ್ತಾರೆ, ರೇಣುಕಾ ದಂಡಿನ್ ಹಾಗೂ ರಮೇಶ್ ರಾಠೋಡ ಸೈಕಲ್ ತುಳಿದು ಜನರಲ್ಲಿ ಜಾಗೃತಿ ಮೂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net