

ವಿಜಯಪುರ: ಕಳೆದೊಂದು ವಾರದಿಂದ ಮಂದಗತಿಯಲ್ಲಿ ಸಾಗಿದ್ದ ಕರೊನಾ ಪೀಡಿತರ ಸಂಖ್ಯೆಯಲ್ಲಿ ಬುಧವಾರ ಮತ್ತೆ ಏರಿಕೆ ಕಂಡು ಬಂದಿದ್ದು, ಹೊಸದಾಗಿ 121 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಆ ಮೂಲಕ ಸೋಂಕಿತರ ಸಂಖ್ಯೆ 13419ಕ್ಕೆ ಏರಿಕೆಯಾಗಿದೆ. ಹೊಸದಾಗಿ 33 ಜನ ಗುಣಮುಖರಾಗಿದ್ದು, ಈವರೆಗೆ 12991 ಜನ ಗುಣಮುಖರಾಗಿದ್ದಾರೆ. ಒಟ್ಟು 198 ಜನ ಮೃತಪಟ್ಟಿದ್ದಾರೆ. 230 ಜನ ಚಿಕಿತ್ಸೆ ಪಡೆಯುತ್ತಿದ್ದು, 1455 ಜನರ ವರದಿ ಬರಬೇಕಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.