ಕಡ್ಡಾಯವಾಗಿ ಬೂಸ್ಟರ್ ಡೋಸ್ ತೆಗೆದುಕೊಳ್ಳಿ

VJP-24-3
Published on

ವಿಜಯಪುರ: ಕರೊನಾದಿಂದ ರಕ್ಷಣೆಗಾಗಿ ಪ್ರತಿಯೊಬ್ಬರೂ ಬೂಸ್ಟರ್ ಡೋಸ್ ಕಡ್ಡಾಯವಾಗಿ ಪಡೆಯಬೇಕೆಂದು ಟಿಸಿಐ ಫೌಂಡೇಷನ್ ಹೆಲ್ತ್ ಎಜ್ಯುಕೇಟರ್ ಮಹಾಂತೇಶ ಲಮಾಣಿ ಹೇಳಿದರು.

ಸ್ಪಂದನ ಸೇವಾ ಸಂಸ್ಥೆ ಹಾಗೂ ಟಿಸಿಐ ಫೌಂಡೇಷನ್ ವತಿಯಿಂದ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕರೊನಾ ಲಸಿಕಾ ಮೇಳದಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕರ್ನಾಟಕ ಸರ್ಕಾರ ಇವರ ಮಾರ್ಗಸೂಚಿಯಂತೆ 2021 ಜನವರಿ 16ರಿಂದ ರಾಜ್ಯದಲ್ಲಿ ಕರೊನಾ ಲಸಿಕಾ ಕಾರ್ಯಕ್ರಮ ಆರಂಭಿಸಲಾಗಿದೆ. ಹಂತ ಹಂತವಾಗಿ ಲಸಿಕಾ ‘ಹರ್ ಘರ್ ದಸ್ತಕ್’ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ ಎಂದರು.

ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಂಗನಾಥ ಮತ್ತು ಗಣೇಶ ಜಳಕಿ, ಮಲ್ಲಿಕಾರ್ಜುನ ಕುಂಬಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net