ಗುಣಮುಖರ ಸಂಖ್ಯೆ ಹೆಚ್ಚಳ

Corona
Published on

ವಿಜಯಪುರ: ಜಿಲ್ಲೆಯಲ್ಲಿ ಸೋಮವಾರ ಮತ್ತೆ ಮೂವರು ಮೃತಪಟ್ಟಿದ್ದು, 87 ಜನರಿಗೆ ಕರೊನಾ ಸೋಂಕು ದೃಢವಾಗಿದೆ. ಇನ್ನೂ 112 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ತಿಳಿಸಿದ್ದಾರೆ.

112 ಜನ ಬಿಡುಗಡೆ

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ. 112 ಜನರು ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ಒಟ್ಟು 5825 ಜನರು ಈ ವರೆಗೆ ಬಿಡುಗಡೆಯಾಗಿದ್ದಾರೆ. ಈ ವರೆಗೆ ಒಟ್ಟು 6,676 ಜನರಿಗೆ ಸೋಂಕು ದೃಢವಾಗಿದೆ.
ಒಟ್ಟು 73,598 ಜನರ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 66,236 ಜನರ ವರದಿ ನಗೆಟಿವ್ ಬಂದಿದೆ. ಇನ್ನೂ 686 ಜನರ ವರದಿ ಬರಬೇಕಿದೆ. 745 ಸಕ್ರಿಯ ಪ್ರಕರಣಗಳಿದ್ದು, ಸೋಂಕಿತರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 55,116 ಜನರ ಮೇಲೆ ನಿಗಾ ವಹಿಸಲಾಗಿದೆ. 42,008 ಜನರು ಕ್ವಾರಂಟೈನ್ ಅವಧಿ ಮುಗಿಸಿದ್ದಾರೆ. 7,177 ಜನರು ರಿಪೋರ್ಟಿಂಗ್ ಅವಧಿಯಲ್ಲಿದ್ದಾರೆ.

ತಾಲೂಕುವಾರು ಮಾಹಿತಿ

ವಿಜಯಪುರ ತಾಲೂಕು ವ್ಯಾಪ್ತಿ 3504, ಬಸವನ ಬಾಗೇವಾಡಿ 667, ಬಬಲೇಶ್ವರ 65, ಚಡಚಣ 40, ದೇವರಹಿಪ್ಪರಗಿ 59, ಇಂಡಿ 599, ಕೊಲ್ಹಾರ 57, ಮುದ್ದೇಬಿಹಾಳ 644, ನಿಡಗುಂದಿ 36, ಸಿಂದಗಿ 566, ತಾಳಿಕೋಟೆ 212, ತಿಕೋಟಾ 76 ಹಾಗೂ ಇತರ ಜಿಲ್ಲೆಗಳಿಂದ ಆಗಮಿಸಿದ 151 ಜನರಿಗೆ ಕೋವಿಡ್ ಸೋಂಕು ದೃಢವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net