99ಕ್ಕೇರಿದ ಮೃತರ ಸಂಖ್ಯೆ

Corona
Published on

ವಿಜಯಪುರ: ಜಿಲ್ಲೆಯಲ್ಲಿ ಶನಿವಾರ ಮತ್ತೆ 140 ಜನರಿಗೆ ಕರೊನಾ ಸೋಂಕು ದೃಢವಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಮೃತರ ಸಂಖ್ಯೆ 99ಕ್ಕೇರಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಮಾಹಿತಿ ನೀಡಿದ್ದಾರೆ.
ಮುದ್ದೇಬಿಹಾಳದ ನಿವಾಸಿ 57 ವರ್ಷದ ವ್ಯಕ್ತಿ, ಜಮಖಂಡಿ ಮೂಲದ 70 ವರ್ಷದ ವೃದ್ಧ, 54 ವರ್ಷದ ವ್ಯಕ್ತಿ ಹಾಗೂ ಬೆಳಗಾವಿ ಜಿಲ್ಲೆಯ ರಾಯಬಾಗ ಮೂಲದ ನಿವಾಸಿ 57 ವರ್ಷದ ವ್ಯಕ್ತಿ ಹೆಚ್ಚಿನ ಚಿಕಿತ್ಸೆಗೆ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದು, ಮೃತರ ಅಂತ್ಯ ಸಂಸ್ಕಾರ ಶಿಷ್ಟಾಚಾರದಂತೆ ನೆರವೇರಿಸಲಾಗಿದೆ ಎಂದು ತಿಳಿಸಿದ್ದಾರೆ.

6,472 ಕ್ಕೇರಿದ ಸೋಂಕಿತರು

ಜಿಲ್ಲೆಯಲ್ಲಿ ಶನಿವಾರ ಮತ್ತೆ 140 ಜನರಿಗೆ ಕರೊನಾ ಸೋಂಕು ಇರುವುದು ದೃಢವಾಗಿದೆ. 6,472 ಜನರಿಗೆ ಸೋಂಕು ದೃಢವಾಗಿದೆ. 86 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಟ್ಟು 5,517 ಜನರು ಬಿಡುಗಡೆಗೊಂಡಿದ್ದಾರೆ.
72,667 ಜನರ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 64,780 ಜನರ ವರದಿ ನೆಗೆಟಿವ್ ಬಂದಿದೆ. ಇನ್ನೂ 1,415 ಜನರ ವರದಿ ಬರಬೇಕಿದೆ. 856 ಸಕ್ರಿಯ ಪ್ರಕರಣಗಳಿದ್ದು, ಸೋಂಕಿತರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 54,759 ಜನರ ಮೇಲೆ ನಿಗಾ ವಹಿಸಲಾಗಿದೆ. 41,674 ಜನರು ಕ್ವಾರಂಟೈನ್ ಅವಧಿ ಮುಗಿಸಿದ್ದಾರೆ. 7,469 ಜನರು ರಿಪೋರ್ಟಿಂಗ್ ಅವಧಿಯಲ್ಲಿದ್ದಾರೆ.

ತಾಲೂಕುವಾರು ಮಾಹಿತಿ

ವಿಜಯಪುರ ತಾಲೂಕು ವ್ಯಾಪ್ತಿ 3440, ಬಸವನಬಾಗೇವಾಡಿ 609, ಬಬಲೇಶ್ವರ 65, ಚಡಚಣ 35, ದೇವರಹಿಪ್ಪರಗಿ 59, ಇಂಡಿ 570, ಕೊಲ್ಹಾರ 57, ಮುದ್ದೇಬಿಹಾಳ 628, ನಿಡಗುಂದಿ 35, ಸಿಂದಗಿ 543, ತಾಳಿಕೋಟೆ 198, ತಿಕೋಟಾ 76 ಹಾಗೂ ಇತರ ಜಿಲ್ಲೆಗಳಿಂದ ಆಗಮಿಸಿದ 148 ಜನರಿಗೆ ಕೋವಿಡ್ ಸೋಂಕು ದೃಢವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net