ಡಾ. ಹರ್ಡಿಕರ್‌ರ ಎಲ್ಲರ ಪ್ರೇರಣಾತ್ಮಕ ಶಕ್ತಿ

vms-26-3
Published on

ವಿಜಯಪುರ: ಡಾ. ಹರ್ಡಿಕರ್‌ರ ಶಿಸ್ತುಬದ್ಧ ಜೀವನ ಹಾಗೂ ರಾಷ್ಟ್ರಪ್ರೇಮ ಅನುಕರಣೀಯ. ನಾವೆಲ್ಲ ಅವರ ತತ್ವಾದರ್ಶಗಳನ್ನು ಪಾಲಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಭಾರತ ಕಾಂಗ್ರೆಸ್ ಸೇವಾದಳ ಸಂಸ್ಥಾಪಕ ಡಾ. ಎನ್.ಎಸ್. ಹರ್ಡಿಕರ್‌ರ 45ನೇ ಪುಣ್ಯತಿಥಿ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹರ್ಡಿಕರ್ ಅವರು ಕಾಂಗ್ರೆಸ್ ಸೇವಾದಳದ ಸಂಸ್ಥಾಪಕರಾಗಿದ್ದರು. 1889 ಮೇ 7ರಂದು ಧಾರವಾಡದಲ್ಲಿ ಜನಿಸಿದ ಅವರು ಕನ್ನಡಿಗರಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸುವಲ್ಲಿ ಶ್ರಮಿಸಿದರು. ವೈದ್ಯಕೀಯ ಕ್ಷೇತ್ರದಲ್ಲಿದ್ದರೂ ರಾಷ್ಟ್ರ ನಿರ್ಮಾಣದ ಆಸಕ್ತಿಯೇ ಅವರಲ್ಲಿ ಹೆಚ್ಚಾಗಿತ್ತು. ಆರ್ಯ ಬಾಲಸಭಾ ಎಂಬ ಕ್ಲಬ್ ಕಟ್ಟುವ ಮೂಲಕ ತನ್ನ ಸ್ನೇಹಿತರಿಗೆ ಅವರೊಬ್ಬ ಪ್ರೇರಣಾತ್ಮಕ ಶಕ್ತಿಯಾಗಿದ್ದರು. ಅವರ ಸೇವೆ ಗುರುತಿಸಿ 1958ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಹೇಳಿದರು.

ಅಬ್ದುಲ್ ಹಮೀದ್ ಮುಶ್ರಿಫ್, ಸಂತೋಷ ಬಾಲಗಾವಿ ಸೇವಾದಳದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಕೆಪಿಸಿಸಿ ಕಿಸಾನ್ ಘಟಕದ ಕಾರ್ಯದರ್ಶಿ ಎಸ್.ಎಂ.ದುಂಡಸಿ, ಆರ್.ವಿ. ಬಾವಿಕಟ್ಟಿ, ವಸಂತ ಹೊನಮೊಡೆ, ನಿಂಗಪ್ಪ ಸಂಗಾಪುರ, ಮಂಜುಳಾ ಗಾಯಕವಾಡ, ಶಫೀಕ್ ಮನಗೂಳಿ, ರವಿಗೌಡ ಪಾಟೀಲ, ಲಕ್ಷ್ಮಣ ಇಳಕಲ್ಲ, ಸಂಜು ಕಂಬಳಿ, ಮಹಾದೇವಿ ಜಾಧವ, ತಾಜುದ್ದೀನ್ ಖಲೀಫ್, ದಾವಲಸಾಬ ಬಾಗವಾನ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net