ಡಾ.ಎನ್.ಎಸ್.ಹರ್ಡೀಕರ ಕೊಡುಗೆ ಅಪಾರ

hn-7-2
Published on

ವಿಜಯಪುರ: ನಗರದ ಕಾಂಗ್ರೆಸ್ ಜಿಲ್ಲಾ ಕಾರ್ಯಾಲಯದಲ್ಲಿ ಶನಿವಾರ ಬಸವ ಜಯಂತಿ ಹಾಗೂ ಸೇವಾದಳ ಸಂಸ್ಥಾಪಕ ಡಾ.ಎನ್.ಎಸ್. ಹರ್ಡೀಕರ ಅವರ ಜನ್ಮ ದಿನ ಆಚರಿಸಲಾಯಿತು.ಈ ವೇಳೆ ಕೆಪಿಸಿಸಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೆ.ಎಫ್​.ಅಂಕಲಗಿ ಮಾತನಾಡಿ, ಡಾ.ಎನ್.ಎಸ್.ಹರ್ಡೀಕರ ಅವರು 1889 ಮೇ 7 ರಂದು ಧಾರವಾಡ ಜಿಲ್ಲೆ ಹಾನಗಲ್ ತಾಲೂಕಿನ ತಿಳವಳ್ಳಿ ಎಂಬ ಗ್ರಾಮದಲ್ಲಿ ಸುಬ್ಬಾರಾವ ಹಾಗೂ ಯಮುನಾಬಾಯಿ ದಂಪತಿ ಮಗನಾಗಿ ಜನಿಸಿದರು. ಅವರ ವಿದ್ಯಾಭ್ಯಾಸವು ಹುಬ್ಬಳ್ಳಿಯಲ್ಲಿ ನಡೆದು ಮುಂದೆ ಉನ್ನತ ಶಿಕ್ಷಣಕ್ಕಾಗಿ ಕೋಲ್ಕತಾಗೆ ಹೋಗಿ ಅಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿ, 1916ರಲ್ಲಿ ಅಮೆರಿಕಕ್ಕೆ ತೆರಳಿ ಅಲ್ಲಿಯ ರಾಜಕೀಯ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸಿದರು. 1921ರಲ್ಲಿ ಭಾರತಕ್ಕೆ ಮರಳಿ ಹುಬ್ಬಳ್ಳಿಯಲ್ಲಿ ಸೇವಾದಳ ಸ್ಥಾಪಿಸಿದರು.

1923ರಲ್ಲಿ ಕಾಕಿನಾಡಿನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಡಾ.ಎನ್.ಎಸ್.ಹರ್ಡೀಕರ ಅವರ ನೇತೃತ್ವದಲ್ಲಿ 13 ಜನರುಳ್ಳ ಸದಸ್ಯ ಸಮಿತಿ ರಚಿಸಲಾಯಿತು. ಇದೇ ಅವಧಿಯಲ್ಲಿ ಹಿಂದುಸ್ತಾನಿ ಸೇವಾ ಮಂಡಲವನ್ನು ರಚಿಸಲಾಯಿತು. ನಂತರ ಸೇವಾದಳವನ್ನು ಮರುನಾಮಕರಣ ಮಾಡಲಾಯಿತು. ಹರ್ಡೀಕರ ಅವರು ಎರಡು ಬಾರಿ ಸಂಸದರಾಗಿ ಸೇವೆ ಸಲ್ಲಿಸಿ 1958ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಪಾತ್ರರಾದರು. ಅವರ ಜನ್ಮ ಶತಮಾನೋತ್ಸವದ ನೆನಪಿಗಾಗಿ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಲಾಯಿತು ಎಂದು ಹೇಳಿದರು.

ಕೆಪಿಸಿಸಿ ಸೇವಾದಳ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಕೋರಡ್ಡಿ, ಕೆಪಿಸಿಸಿ ಮಹಿಳಾ ಉಪಾಧ್ಯಕ್ಷೆ ವಿದ್ಯಾವತಿ ಅಂಕಲಗಿ, ಜಿಲ್ಲಾ ಸೇವಾದಳ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಕೆಪಿಸಿಸಿ ವೈದ್ಯಕೀಯ ಘಟಕದ ಪ್ರಧಾನ ಕಾರ್ಯದರ್ಶಿ ಡಾ.ಬಸವರಾಜ ಬಿರಾದಾರ, ಸಂತೋಷ ಬೆಳ್ಳೆನ್ನವರ, ಚಾಂದಸಾಬ ಗಡಗಲಾವ, ವಿಜಯಕುಮಾರ ಘಾಟಗೆ, ವೀಣಾ ರಾಠೋಡ, ವಸಂತ ಹೊನಮೋಡೆ, ರಾಜೇಶ್ವರಿ ಚೋಳಕೆ, ಶರಣಪ್ಪ ಯಕ್ಕುಂಡಿ, ಮಂಜುಳಾ ಗಾಯಕವಾಡ, ಲಕ್ಷ್ಮಿ ಕ್ಷೀರಸಾಗರ, ಮಂಜುಳಾ ಜಾಧವ, ಶಫೀಕ ಮನಗೂಳಿ, ನಿಂಗಪ್ಪ ಸಂಗಾಪೂರ, ಮಹಾದೇವ ಜಾಧವ, ತಾಜುದ್ದೀನ ಖಲೀಾ, ಇಲಿಯಾಸ ಸಿದ್ದಿಕಿ, ಶಂಕರಲಿಂಗಯ್ಯ ಮಠ, ರಮಜಾನ ಹೆಬ್ಬಾಳ, ಸುಂದರಪಾಲ ರಾಠೋಡ, ಸುಜಾತಾ ಶಿಂಧೆ, ಲಕ್ಷ್ಮ್ಮಣ ಇಲಕಲ್, ಪ್ರದೀಪ ಸೂರ್ಯವಂಶಿ, ಅಶ್ವಿನಿ ಪಾತ್ರೋಟಿ, ಪರಮೇಶ ಅವರಾದಿ, ಸಂಗಾರಡ್ಡಿ ಕಡಕೋಳ, ರುಕ್ಮಿಣಿ ಚವ್ಹಾಣ, ಎಂ.ಸಿ.ಸಕ್ರಿ, ರಜಾಕ ಕಾಖಂಡಕಿ, ಬಾಬು ಯಾಳವಾರ, ಮಂಜುನಾಥ ನಿಡೋಣಿ, ಸಮೀಮಾ ಅಕ್ಕಲಕೋಟ, ಸತೀಶ ಕಾಂಬಳೆ, ಬಂದೇನವಾಜ ಮುಲ್ಲಾ, ಬಸವರಾಜ ಕೋಳಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net