

ವಿಜಯಪುರ: ಇಲ್ಲಿನ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ನಿರ್ಮಿಸಿರುವ ಕೀಟ ಉದ್ಯಾನಕ್ಕೆ ಬುಧವಾರ ಧಾರವಾಡ ಕೃಷಿ ವಿವಿ ಕುಲಪತಿ ಡಾ.ಎಂ.ಬಿ.ಚೆಟ್ಟಿ ಅವರು ಭೇಟಿ ನೀಡಿ, ವೀಕ್ಷಿಸಿದರು.
ಕೀಟ ಉದ್ಯಾನದಲ್ಲಿ ಅಂದಾಜು 35 ವಿವಿಧ ಬೆಳೆಗಳನ್ನು (ಹಣ್ಣು, ತರಕಾರಿ ಮತ್ತು ಹೊಲದ ಬೆಳೆಗಳನ್ನು) ಬೆಳೆಯಲಾಗಿದೆ. ವಿವಿಧ ಕೀಟಗಳನ್ನು ಸಮೀಕ್ಷೆ ಮಾಡಲು ವಿವಿಧ ತರಹದ ಕೀಟ ಬಲೆಗಳನ್ನು ಪ್ರಾತ್ಯಕ್ಷಿಕೆ ರೂಪದಲ್ಲಿ ಇಡಲಾಗಿದೆ. ಕೀಟ ಉದ್ಯಾನದಲ್ಲಿ ಕೀಟ ಜಲಚರಗಳು ಮತ್ತು ಮೀನುಗಳನ್ನು ಸಾಕಲಾಗಿದೆ. ನಾಲ್ಕು ಉತ್ಪನ್ನಕಾರಕ ಕೀಟ/ಜೀವಿಗಳಾದ ರೇಷ್ಮೆಹುಳು, ಅರಗಿನ ಹುಳು, ಜೇನುಹುಳು ಮತ್ತು ಎರೆಹುಳುಗಳನ್ನು ಸಾಕಲಾಗಿದ್ದು ಎಲ್ಲರ ಗಮನ ಸೆಳೆಯುತ್ತಿವೆ.
ಕೃಷಿ ವಿವಿ ಹಣಕಾಸು ನಿಯಂತ್ರಣಾಧಿಕಾರಿ ಎಸ್. ಎಂ.ಹೊನ್ನಳ್ಳಿ, ಆಡಳಿತ ಮಂಡಳಿ ಸದಸ್ಯ ಸುರೇಶ ಗೊಣಸಗಿ, ಡೀನ್ ಡಾ. ಎಸ್. ಬಿ. ಕಲಘಟಗಿ, ಸಹ ವಿಸ್ತರಣಾ ನಿರ್ದೇಶಕ ಡಾ. ಆರ್. ಬಿ. ಬೆಳ್ಳಿ. ವಿಜ್ಞಾನಿಗಳಾದ ಡಾ.ಕೃಷ್ಣ ರಾಜ, ಡಾ. ಎಸ್. ಎ. ಬಿರಾದಾರ, ವಿಡಿಎ ಅಧ್ಯಕ್ಷ ಶ್ರೀಹರಿ ಗೋಳಸಂಗಿ, ಡಾ. ರಾಜಗೋಪಾಲ ಜತೆಗಿದ್ದರು.