ಗ್ರಾಹಕರ ಧರಣಿಗೆ ಸಂಗನಬಸವ ಶ್ರೀ ಬೆಂಬಲ

VJP 12-1
Published on

ವಿಜಯಪುರ: ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿ ಆವರಣದಲ್ಲಿ ಗ್ರಾಹಕರು ನಡೆಸುತ್ತಿರುವ ಧರಣಿಗೆ ಶನಿವಾರ ಹುಣಶ್ಯಾಳ ಪಿಬಿಯ ಸಂಗನಬಸವ ಶ್ರೀಗಳು ಬೆಂಬಲ ನೀಡಿದರು.

ಈ ವೇಳೆ ಮಾತನಾಡಿ, ಮುರುಗೇಶ ನಿರಾಣಿ ಕ್ರೆಡಿಟ್ ಸೌಹಾರ್ದದಲ್ಲಿ ಹಣ ತೊಡಗಿಸಿದ ಗ್ರಾಹಕರಿಗೆ ಕೂಡಲೇ ಮರು ಪಾವತಿ ಮಾಡಬೇಕು. ಅಲ್ಲಿವರೆಗೆ ಹೋರಾಟ ಮುಂದುವರಿಯಲ್ಲಿದ್ದು ಮಠಾಧೀಶನಾಗಿ ಸಂಪೂರ್ಣ ಬೆಂಬಲ ಸೂಚಿಸುವೆ ಎಂದರು.

ಮುಖಂಡರಾದ ಈಶ್ವರಪ್ಪ ಸಾರವಾಡ, ಅರವಿಂದ ಕುಲಕರ್ಣಿ, ಸದಾಶಿವ ಬರಟಗಿ, ಚಂದ್ರಾಮ ತೆಗ್ಗಿ, ಶೇಖಪ್ಪ ಕರಾಬಿ, ಮಾಂತೇಶ ನಡಕಟ್ಟಿ, ಸಂಜೀವ ದಳವಾಯಿ, ವಿಜಯಲಕ್ಷ್ಮಿ ತನಕಳ್ಳಿ, ಐ.ಜಿ. ದಿನ್ನಿಮನಿ, ಎಸ್.ಎಸ್. ಕೋಳಕೂರ, ಗೌರಮ್ಮ ತೊರವಿ, ಚಂದ್ರಶೇಖರ ಮಾಶ್ಯಾಳ, ಸುನಂದಾ ಕಟ್ಟಿಮನಿ, ಲಕ್ಷ್ಮಿಬಾಯಿ ಕುಂಬಾರ, ಕಾಸು ಮಾಲಗಾರ, ಶ್ರೀಕಾಂತ ಕುಂಬಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net