VIDEO| ಬೆರಗು ಮೂಡಿಸುವ ಬಾಲ ಪ್ರತಿಭೆ; ಸಮನ್ವಿತಾಗೆ ಸಾಟಿ ಯಾರು?

Child Tallent
Published on

ವಿಜಯಪುರ: ಎರಡೂವರೆ ವರ್ಷದ ಮಗುವಿನ ತೊದಲು ನುಡಿ ಕೇಳುವುದೇ ಒಂದು ಸೊಗಸು, ಅಂಥದರಲ್ಲಿ ರಾಜ್ಯಗಳ ರಾಜಧಾನಿ, ಇಂಗ್ಲಿಷ್ ವರ್ಣಮಾಲೆ, ಜ್ಞಾನ ಪೀಠ ಪುರಸ್ಕೃತರ ಹೆಸರು, ಕನ್ನಡ ಸ್ವರ, ವ್ಯಂಜನಗಳು, ಹಿಂದಿ, ಕನ್ನಡ ಮತ್ತು ಇಂಗ್ಲಿಷ್ ಸಂಖ್ಯೆಗಳ ಎಣಿಕೆ, ತಿಂಗಳುಗಳು, ವಾರಗಳು....ಹೀಗೆ ಅನೇಕ ವಿಷಯಗಳ ಬಗ್ಗೆ ಪಟಪಟಾ ಅಂತಾ ನುಡಿದರೆ ಹೇಗಿರುತ್ತೆ ನೀವೇ ಹೇಳಿ?

ಅಚ್ಚರಿಯಾದರೂ ಇಂಥದ್ದೊಂದು ಅಸಾಮಾನ್ಯ ಪ್ರತಿಭೆಯೊಂದನ್ನು ನಿಮಗೆ ಪರಿಚಯಿಸುತ್ತೇವೆ ಬನ್ನಿ. ಇಲ್ಲಿನ ಅಲ್ ಅಮೀನ್ ಕಾಲೇಜ್ ಮುಂಭಾಗದ ಸೇನಾ ನಗರದ ನಿವಾಸಿ ಎಕ್ಸಲೆಂಟ್ ಶಾಲೆಯ ಶಿಕ್ಷಕಿ ಅಶ್ವಿನಿ ವಿರೇಶ ಕರಕಟ್ಟಿ ಅವರ ಪುತ್ರಿ ಸಮನ್ವಿತಾಳೇ ಆ ಅಸಾಮಾನ್ಯ ಪ್ರತಿಭೆ.

ಕೇವಲ 2.4 ತಿಂಗಳು ವಯೋಮಾನದ ಸಮನ್ವಿತಾಳ ತೊದಲು ಮಾತು ಕೇಳುವುದೇ ಒಂದು ಸೊಗದು. ಅಂಥದರಲ್ಲಿ ಪ್ರಾಯಕ್ಕೂ ಮೀರಿದ ಜ್ಞಾನವನ್ನು ಪ್ರದರ್ಶಿಸುವ ಮೂಲಕ ಸಮನ್ವಿತಾ ಜನಾಕರ್ಷಿಸುತ್ತಿದ್ದಾಳೆ. ಪ್ರಾಣಿ ಪಕ್ಷಿಗಳನ್ನು ಗುರುತಿಸುವುದು, ಜ್ಞಾನಪೀಠ ಪುರಸ್ಕೃತರನ್ನು ಗುರುತಿಸುವ ಮೂಲಕ ತನ್ನ ಚತುರತೆಯನ್ನು ಪ್ರದರ್ಶಿಸುತ್ತಿದ್ದಾರೆ.

ಮಗುವಿನ ಲಾಲನೆ, ಪಾಲನೆ ಜೊತೆಗೆ ಶಿಕ್ಷಕಿ ಅಶ್ವಿನಿ ಮತ್ತು ಉದ್ಯಮಿಯಾಗಿರುವ ವಿರೇಶ ಅವರು ನೀಡುತ್ತಿರುವ ಸಂಸ್ಕಾರ, ಶಿಕ್ಷಣ ಪಾಲಕರಿಗೆ ಮಾದರಿಯಾಗಿದೆ. ಜತೆಗೆ ಸಮನ್ವಿತಾಳ ನೆನಪಿನ ಶಕ್ತಿಯೂ ಮೆಚ್ಚುವಂಥದ್ದಾಗಿದೆ. ಪ್ರಾಯಕ್ಕೂ ಮೀರಿ0ದ ಬುದ್ದಿಮತ್ತೆ ಹೊಂದಿರುವ ಸಮನ್ವಿತಾಳ ಜ್ಞಾನ ಪಾಂಡಿತ್ಯವನ್ನು ಹೇಳುವುದಕ್ಕಿಂತ ತಾವೊಂದು ಬಾರಿ ನೋಡಿ, ಕೇಳಿ, ಅರಿತು ಅನುಭವಿಸಲೇಬೇಕು. ಮತ್ತೇಕೆ ತಡ ಈ ನೋಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net