ಆಟವಾಡುವಾಗ ರಿವಾಲ್ವರ್​ನಿಂದ ಆಕಸ್ಮಿಕವಾಗಿ ಸಿಡಿದ ಗುಂಡು: ಬಾಲಕನಿಗೆ ಗಂಭೀರ ಗಾಯ

Rivolver
Published on

ವಿಜಯಪುರ: ಮನೆಯಲ್ಲಿ ಆಟ ಆಡುವಾಗ ನಾಲ್ಕು ವರ್ಷದ ಬಾಲಕನೊಬ್ಬ ರಿವಾಲ್ವಾರ್​​ನಿಂದ ತೊಡೆಗೆ ಆಕಸ್ಮಿಕವಾಗಿ ಗುಂಡು ಹಾರಿಸಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆ ಚಡಚಣ ಪಟ್ಟಣದಲ್ಲಿ ನಡೆದಿದೆ.

ಚಡಚಣ ಪಟ್ಟಣದ ಮರಡಿ(ಮಡ್ಡಿ) ಪ್ರದೇಶದಲ್ಲಿ ಘಟನೆ ನಡೆದಿದ್ದು, ಮನೆಯ ತಿಜೋರಿಯಲ್ಲಿ ಇಡಲಾಗಿದ್ದ ಪರವಾನಗಿ ಹೊಂದಿದ್ದ ಲೋಡೆಡ್ ರಿವಾಲ್ವರ್​ನಿಂದ ಗುಂಡು ಹಾರಿದೆ.

ಆಟವಾಡುವಾಗ ಬಾಲಕ ಅಭಿಷೇಕ ಗೋಟ್ಯಾಳ ರಿವಾಲ್ವರ್ ಹೊರ ತೆಗೆದ್ದಾನೆ. ಬಳಿಕ ಅದರೊಂದಿಗೆ ಆಟವಾಡುವಾಗ ಆಕಸ್ಮಿಕವಾಗಿ ಗುಂಡು ಸಿಡಿದು ತೊಡೆಗೆ ತಾಗಿದೆ. ಚಿಕಿತ್ಸೆಗಾಗಿ ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಘಟನಾ ಸ್ಥಳಕ್ಕೆ ಚಡಚಣ ಸಿಪಿಐ ಚಿದಂಬರ ಮಡಿವಾಳರ, ಪಿಎಸ್ಐ ಸತಿಗೌಡರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net