ಪೊಲೀಸಪ್ಪನ ಲಂಚಾವತಾರ ಬಯಲು

VJP 28-3
Published on

ವಿಜಯಪುರ: ಲಾಕ್‌ಡೌನ್ ಸೇವೆಯನ್ನು ದುರುಪಯೋಗ ಪಡಿಸಿಕೊಂಡಿರುವ ಸಂಚಾರಿ ಪೊಲೀಸಪ್ಪನ ಲಂಚಾವತಾರ ಕ್ಯಾಮರಾದಲ್ಲಿ ಸೆರೆಯಾಗಿದ್ದಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಮೈಲೇಜ್ ಪಡೆಯುತ್ತಿದೆ.
ಕೇಂದ್ರ ಬಸ್ ನಿಲ್ದಾಣದ ಎದುರು ಸೇವೆಗೆ ನಿಯೋಜಿತಗೊಂಡಿದ್ದ ಪೇದೆ ಬೈಕ್ ಸವಾರನಿಂದ ಹಣ ಪಡೆದು ಜೇಬಿನಲ್ಲಿರಿಸಿಕೊಂಡಿರುವ ದೃಶ್ಯ ಸೆರೆಯಾಗಿದೆ. ಪೇದೆ ಹೆಸರು ಕೋನಶಿರಸಗಿ ಎನ್ನಲಾಗಿದೆ.
ಎರಡು ದಿನದ ಹಿಂದೆಯೇ ಈ ಘಟನೆ ನಡೆದಿದೆ. ಅನಗತ್ಯವಾಗಿ ಬೈಕ್ ಮೇಲೆ ತಿರುಗುತ್ತಿದ್ದ ಆರೋಪದ ಮೇಲೆ ಸವಾರನನ್ನು ಪೇದೆ ತಡೆದು ಕೀ ಕಸಿದುಕೊಂಡಿದ್ದಾನೆ. ಬಳಿಕ ಸವಾರ ಮನವಿ ಮಾಡಿಕೊಂಡರೂ ಜಗ್ಗಿಲ್ಲ. ಸವಾರ ಲಂಚ ಕೊಟ್ಟ ಬಳಿಕ ಕೀ ಕೊಟ್ಟ ಪೇದೆ, ಪರ್ಸ್ ತೆಗೆದು ಹಣ ಎಣಿಸಿ ಇರಿಸಿಕೊಳ್ಳುತ್ತಿದ್ದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಪೇದೆ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಎಸ್‌ಪಿ ಅನುಪಮ ಅಗರವಾಲ್ ಅವರನ್ನು ವಿಚಾರಿಸಿದಾಗ ಪೇದೆ ಯಾರೆಂದು ತಿಳಿದು ಬಂದಿಲ್ಲ. ಗುರುತಿಸಿ ಕ್ರಮ ಕೈಗೊಳ್ಳಲು ತಿಳಿಸಿದ್ದಾಗಿ ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net