ಕೆಸರು ಗದ್ದೆಯಾದ ವಿಜಯಪುರ ಬಸ್​ ನಿಲ್ದಾಣ

17 05 2025_BNG_RURAL_PAGE_5
ದೇವನಹಳ್ಳಿ ತಾಲೂಕಿನ ವಿಜಯಪುರದ ಬಸ್​ ನಿಲ್ದಾಣದಲ್ಲಿ ಪ್ರಯಾಣಿಕರು ಮಣ್ಣು ಅಗೆದು ವಿಲೇವಾರಿ ಮಾಡದ ಕಾರಣ ಮಳೆಯಿಂದ ಕೆಸರು ಗದ್ದೆಯಂತಾದ ಬಿಎಂಟಿಸಿ ಬಸ್​ ನಿಲ್ದಾಣ.
Published on

ವಿಜಯಪುರ: ಪಟ್ಟಣದ ಬಸ್​ ನಿಲ್ದಾಣದಲ್ಲಿ ಚರಂಡಿಗಳನ್ನು ಅಗೆದ ಮಣ್ಣು ವಿಲೇವಾರಿ ಮಾಡದ ಕಾರಣ, ಮಳೆ ಬಂದರೆ ಬಸ್​ ನಿಲ್ದಾಣ ಕೆಸರಿನ ಗದ್ದೆಯಂತಾಗಿದೆ. ಬಿಸಿಲು ಇದ್ದರೆ ಧೂಳು ಎದ್ದು, ಪ್ರಯಾಣಿಕರು ನಿಲ್ದಾಣದಲ್ಲಿ ನಿಲ್ಲಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ವಾಗುತ್ತದೆ. ಪುರಸಭೆಯವರಾಗಲಿ, ಇಲ್ಲವೇ ರಸ್ತೆ ನಿರ್ಮಾಣಕ್ಕಾಗಿ ಚರಂಡಿ ಅಗೆದ ಗುತ್ತಿಗೆದಾ ರರಾಗಲಿ ಕೂಡಲೇ ಬಸ್​ ನಿಲ್ದಾಣದಲ್ಲಿನ ಮಣ್ಣನ್ನು ತೆಗೆಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವುದರೊಂದಿಗೆ ಸುಗಮ ವಾಹನಗಳ ಸಂಚಾರಕ್ಕೂ ಅನುಕೂಲ ಮಾಡಿಕೊಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net