ಪಕ್ಷ ಬಲವರ್ಧನೆಗೆ ಶ್ರಮಿಸುವೆ

DHP 10-1
Published on

ದೇವರಹಿಪ್ಪರಗಿ: ಪಕ್ಷ ನೀಡಿದ ಜವಾಬ್ದಾರಿ ನಿರ್ವಹಿಸುವ ಮೂಲಕ ತಾಲೂಕಿನಲ್ಲಿ ಪಕ್ಷ ಬಲವರ್ಧನೆಗೆ ಶ್ರಮಿಸಲಾಗುವುದೆಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಮೇಶ ಮಸಬಿನಾಳ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ದೇವರಹಿಪ್ಪರಗಿ ಗೆಳೆಯರ ಬಳಗ ಹಾಗೂ ಬಿಜೆಪಿ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಬಿಜೆಪಿ ಜಗತ್ತಿನಲ್ಲಿಯೇ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿದ ಪಕ್ಷವಾಗಿದ್ದು, ಇಂಥ ಪಕ್ಷದ ಜಿಲ್ಲಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವ ಯೋಗ ಬಂದಿದ್ದು ನನ್ನ ಸುದೈವವಾಗಿದೆ ಎಂದರು. ಹಿರಿಯ ವೈದ್ಯ ಡಾ. ಆರ್.ಆರ್. ನಾಯಿಕ ಮಾತನಾಡಿದರು.

ರಾಮಮಂದಿರ ಸಮರ್ಪಣಾ ನಿಧಿ ಸಹಸಂಚಾಲಕ ಶ್ರೀಧರ ನಾಡಗೌಡ, ಗೆಳೆಯರ ಬಳಗದ ಹುಸೇನಸಾಬ್ ಮಂಡೆ, ಹುಸೇನ್ ಗೌಂಡಿ, ಈರಣ್ಣ ವಸದ, ಮುತ್ತು ತೋಟದ, ಮಕಬೂಲ್ ಬಾಗವಾನ್, ಸಂಗು ಹಳಿಮನಿ, ಖಾಜಾವಲೀ ನದಾಫ್, ಮಹಾಂತೇಶ ಬಿರಾದಾರ, ಶಂಕರ ಗಿಡಕಾರ, ಮುಪ್ಪಯ್ಯ ಭೂಸ್ತಳಿಮಠ, ಸತೀಶ ಬೂದಿಹಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net