ವಾಟರ್ ಫ್ರಂಟ್ ಕಾಮಗಾರಿ ಪರಿಶೀಲನೆ

VJP-30-2
Published on

ವಿಜಯಪುರ: ಭೂತನಾಳ ಕೆರೆ ವ್ಯಾಪ್ತಿಯ ಉದ್ಯಾನ ಹಾಗೂ ವಾಟರ್ ಫ್ರಂಟ್ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಭೂತನಾಳ ಕೆರೆ ಪಕ್ಕದ ಉದ್ಯಾನವನ ಹಾಗೂ ವಾಟರ್ ಫ್ರಂಟ್ ಅಭಿವೃದ್ಧಿ ಕಾಮಗಾರಿಗಳನ್ನು ಗುರುವಾರ ಪರಿಶೀಲಿಸಿದ ಅವರು, ಉದ್ಯಾನ ಹಾಗೂ ವಾಟರ್ ಫ್ರಂಟ್ ಈ ಕಾಮಗಾರಿಗಳನ್ನು ಆದ್ಯತೆ ಮೇಲೆ ಪೂರ್ಣಗೊಳಿಸಬೇಕೆಂದರು.

ಪ್ರಸ್ತುತ ಕಾಮಗಾರಿಯು 9 ಕೋಟಿ ರೂ. ಅಂದಾಜು ಮೊತ್ತದಲ್ಲಿ ಪಾಥ್ ವೇ, ಲ್ಯಾಂಡ್ ಸ್ಟೆಪ್ಪಿಂಗ್, ಕಾರಂಜಿ, ಫುಡ್ ಕೋರ್ಟ್, ಶೌಚಗೃಹ, ಟಿಕೆಟ್ ಕೌಂಟರ್, ಚಿಕ್ಕ ಮಕ್ಕಳ ಉದ್ಯಾನವನ ಹಾಗೂ ಇತರೆ ಘಟಕಗಳು ಇರುವುದಾಗಿ ಮತ್ತು ಹೆಚ್ಚುವರಿ ಅಂದಾಜು 4 ಕೋಟಿ ರೂಗಳಲ್ಲಿ ವಾಕ್ ವೇ, ಸೋಲಾರ್, ಲೈಟ್ ಸಿಸ್ಟಮ್, ಪಾರ್ಕಿಂಗ್, ಬ್ಯಾರಿಕೇಡ್‌ಗಳಿಗೆ ಟೆಂಡರ್ ಕರೆಯುವುದಾಗಿ ಸಹಾಯಕ ಕಾರ್ಯಪಾಲಕ ಅಭಿಯಂತರ ಕೋಲ್ಹಾರ್ ಅವರು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಬಲರಾಮ ಲಮಾಣಿ ಹಾಗೂ ಪಾಲಿಕೆ ಅಭಿಯಂತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net