

ವಿಜಯಪುರ: ಭೀಮಾತೀರ ಖ್ಯಾತಿಯ ಚಡಚಣ ತಾಲೂಕಿನ ಧೂಳಖೇಡ ಹೊರವಲಯದಲ್ಲಿ ಅಪರಿಚಿತ ಶವ ಪತ್ತೆಯಾಗಿದ್ದು ಆಸಿಡ್ ಎರಚಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಶುಕ್ರವಾರ ಬಯಲು ಶೌಚಕ್ಕೆ ಹೋದ ವ್ಯಕ್ತಿಗೆ ಶವ ಕಂಡಿದೆ. ಮೃತ ವ್ಯಕ್ತಿ ಅಂದಾಜು 38 ವರ್ಷದವನಾಗಿದ್ದು ಮುಖ ಗುರುತು ಸಿಗದಂತಾಗಿದೆ. ಕೈ-ಕಾಲುಗಳನ್ನು ನಾಯಿ-ನರಿ ಕಿತ್ತು ತಿಂದಿವೆ. ಕಳೆಬರಕ್ಕೆ ವೈರಸ್ ಅಂಟಿಕೊಂಡಿದ್ದ ಶವ ಕಂಡ ವ್ಯಕ್ತಿ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಝಳಕಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
StartFragment
EndFragment