ಭೀಮಾ ನದಿಗೆ ಈಜಲು ತೆರಳಿದ್ದ ನಾಲ್ವರು ಮಕ್ಕಳು ನೀರುಪಾಲು

Children
Published on

ವಿಜಯಪುರ: ಶನಿವಾರ ಸಂಜೆ ಭೀಮಾ ನದಿಗೆ ಈಜಲು ಹೋಗಿ, ನೀರುಪಾಲಾಗಿರುವ ನಾಲ್ವರು ಮಕ್ಕಳಿಗಾಗಿ ಶೋಧ ಕಾರ್ಯ ಭರದಿಂದ ಸಾಗಿದೆ. ಈ ಘಟನೆ ಮಹಾರಾಷ್ಟ್ರದ ದಕ್ಷಿಣ ಸೋಲಾಪುರ ತಾಲೂಕಿನ ಲವಗಿ ಗ್ರಾಮದ ಬಳಿ ನಡೆದಿದೆ.

ಲವಗಿ ಗ್ರಾಮದ ಶಿವಾನಂದ ಪಾರ್ಶೆಟ್ಟಿ ಅವರ ಮಕ್ಕಳಾದ ಆರತಿ(13) ಮತ್ತು ವಿಠ್ಠಲ(10) ಹಾಗೂ ಶಿವಾಜಿ ತಾನವಡೆ ಎಂಬುವವರ ಮಕ್ಕಳಾದ ಸಮೀಕ್ಷಾ(14) ಮತ್ತು ಅರ್ಪಿತಾ(13) ನೀರುಪಾಲಾದ ಮಕ್ಕಳಾಗಿದ್ದಾರೆ.

ಆರತಿ ಮೃತದೇಹ ಮಾತ್ರ ಪತ್ತೆಯಾಗಿದ್ದು, ಉಳಿದ ಮೂವರ ಮೃತದೇಹಕ್ಕಾಗಿ ಹುಡುಕಾಟ ಮುಂದುವರಿದಿದೆ. ಕುಟುಂಬಸ್ಥರು ಮನೆ ಕೆಲಸದಲ್ಲಿ ತೊಡಗಿದ್ದಾಗ ಮಕ್ಕಳು ನದಿಯಲ್ಲಿ ಸ್ಥಾನಕ್ಕೆಂದು ತೆರಳಿದ್ದರು. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ.

ಘಟನೆ ಸಂಬಂಧ ಮಹಾರಾಷ್ಟ್ರದ ಮಂದ್ರೂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net