

ವಿಜಯಪುರ : ವಿಜಯಪುರ& ಬಬಲೇಶ್ವರ ಮತ್ತು ಬಬಲೇಶ್ವರ& ವಿಜಯಪುರ ಮಧ್ಯೆ ಸಾಮಾನ್ಯ ಸಾರಿಗೆ ಎರಡು ನೂತನ ಬಸ್ಗಳ ಸೇವೆ ಆ. 26 ರಿಂದ ಪ್ರಾರಂಭವಾಗಲಿದೆ.ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರ ಸೂಚನೆ ಮೇರೆಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಪ್ರತಿದಿನ ಸಾರಿಗೆ ಎರಡು ಬಸ್ಗಳನ್ನು ಈ ಮಾರ್ಗದಲ್ಲಿ ಓಡಿಸಲಿದೆ. ಒಂದು ಬಸ್ ವಿಜಯಪುರ& ಖತಿಜಾಪುರ&ಸಾರವಾಡ ಮಾರ್ಗವಾಗಿ ಬಬಲೇಶ್ವರಕ್ಕೆ ಸಂಚರಿಸಿದರೆ, ಇನ್ನೊಂದು ಬಸ್ ಬಬಲೇಶ್ವರ& ಸಾರವಾಡ& ಖತಿಜಾಪುರ ಮಾರ್ಗವಾಗಿ ವಿಜಯಪುರಕ್ಕೆ ಸಂಚರಿಸಲಿದೆ. ಪ್ರತಿದಿನವೂ ಎರಡೂ ಬಸ್ಸುಗಳು ತಲಾ ಎಂಟು ಬಾರಿ ಈ ಮಾರ್ಗದಲ್ಲಿ ಸಂಚಾರ ನಡೆಸಲಿವೆ.
ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ತಮ್ಮ ಶಾಲೆ, ಕಾಲೇಜುಗಳು ಮತ್ತು ದೈನಂದಿನ ಚಟುವಟಿಕೆಗಳ ಅನುಕೂಲಕ್ಕಾಗಿ ಸಾರಿಗೆ ಇಲಾಖೆಯ ಬಸ್ಗಳನ್ನು ನಿಲುಗಡೆ ಮಾಡುವಂತೆ ಸಚಿವರಿಗೆ ಈ ಹಿಂದೆ ಮನವಿ ಮಾಡಿದ್ದರು. ಮನವಿಗೆ ಕೂಡಲೇ ಸ್ಪಂದಿಸಿದ ಸಚಿವರು, ತಣ ಕ್ರಮ ಕೈಗೊಳ್ಳುವಂತೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಸೂಚನೆಗೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ವಿಭಾಗೀಯ ಸಾರಿಗೆ ಅಧಿಕಾರಿಗಳು ಆ. 26 ರಿಂದ ನಗರ ಸಾರಿಗೆ ಬಸ್ ಸೇವೆ ಪ್ರಾರಂಭಿಸಿ ಆದೇಶ ಹೊರಡಿಸಿದ್ದಾರೆ.
ಅಲ್ಲದೆ, ಈ ಮಾರ್ಗವಾಗಿ ಸಂಚರಿಸುವ ಇನ್ನುಳಿದ ಬಸ್ಸುಗಳನ್ನು ಸಾರವಾಡ ಗ್ರಾಮದಲ್ಲಿ ನಿಲುಗಡೆ ಮಾಡುವ ನಿಟ್ಟಿನಲ್ಲಿಯೂ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಸಚಿವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಎಂ.ಬಿ. ಪಾಟೀಲ