ಸಹಕಾರಿ ರಂಗದ ದಿಗ್ಗಜ ಕೆ.ಎಚ್.ಪಾಟೀಲ

hn-16-2
Published on

ವಿಜಯಪುರ: ಬಬಲೇಶ್ವರ ತಾಲೂಕಿನ ಕೃಷ್ಣಾನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ದಿ.ಕೆ.ಎಚ್. ಪಾಟೀಲ ಹುಲಕೋಟಿ ಅವರ 97ನೇ ಜಯಂತ್ಯುತ್ಸವವನ್ನು ಮಂಗಳವಾರ ಆಚರಿಸಲಾಯಿತು.

ಕಾರ್ಖಾನೆ ಅಧ್ಯಕ್ಷ ಶಶಿಕಾಂತಗೌಡ ಬಿ. ಪಾಟೀಲ ಶಿರಬೂರ ಅವರು ಮಾತನಾಡಿ, ಸಹಕಾರಿ ರಂಗದ ದಿಗ್ಗಜ ದಿ.ಕೆ.ಎಚ್. ಪಾಟೀಲ ಅವರು ಸಹಕಾರಿ ಚಳವಳಿ ಮೂಲಕ ಉತ್ತರ ಕರ್ನಾಟಕ ಭಾಗದ ಜನತೆಗೆ ಚಿರಪರಿಚಿತ. ಅವರು ಜನಸಾಮಾನ್ಯರ, ರೈತರ, ಬಡವರ ಜೀವನವನ್ನು ಹಸನುಗೊಳಿಸಲು ನಿರಂತರವಾಗಿ ಶ್ರಮಿಸಿದ್ದಾರೆ ಎಂದು ಸ್ಮರಿಸಿದರು.

ನಿರ್ದೇಶಕರಾದ ತಿಮ್ಮಣ್ಣ ಅಮಲಝರಿ, ವೆಂಕನಗೌಡ ಬಿರಾದಾರಪಾಟೀಲ, ಜಿ.ಕೆ. ಕೋನಪ್ಪನವರ, ರಮೇಶ ಜಕರಡ್ಡಿ, ಹಣಮಂತ ಕೊಣ್ಣೂರ, ಎಸ್.ಆರ್.ನಿಡೋಣಿ, ಜಗದೀಶ ಶಿರಾಳಶೆಟ್ಟಿ, ಎಸ್. ಎಸ್. ಕೊಪ್ಪದ, ವ್ಯವಸ್ಥಾಪಕ ನಿರ್ದೇಶಕ ಎಸ್. ಎಸ್.ಪೂಜಾರಿ, ಮುಖಂಡರಾದ ಯಲ್ಲಪ್ಪ ನ್ಯಾಮಗೌಡ, ರಾಜುಗೌಡ ಪಾಟೀಲ, ಬಸವರಾಜ ಸಿಂಗರಡ್ಡಿ, ಗಿರೀಶ ಕೋರಿ ಹಾಗೂ ಸುತ್ತ-ಮುತ್ತಲಿನ ರೈತರು, ಷೇರು ಸದಸ್ಯರು, ಸಿಬ್ಬಂದಿ ಮತ್ತು ಕಾರ್ಮಿಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net