ವಿಶ್ವ ಹೃದಯ ದಿನಾಚರಣೆ

Heart Day
Published on

ವಿಜಯಪುರ: ಇಂದಿನ ಒತ್ತಡದ ದಿನಗಳಲ್ಲಿ ಪ್ರತಿಯೊಬ್ಬರೂ ಹೃದಯದ ಕಾಳಜಿಯನ್ನು ವಹಿಸುವುದು ಅವಶ್ಯಕವಾಗಿದೆ ಎಂದು ಎಎಸ್‌ಪಿ ಕಾಮರ್ಸ್ ಕಾಲೇಜು ಪ್ರಾಚಾರ್ಯ ವಿ.ಎಸ್.ಬಗಲಿ ಸಲಹೆ ನೀಡಿದರು.
ಇಲ್ಲಿನ ಬಿದರಿ ಆಸ್ಪತ್ರೆಯಲ್ಲಿ ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಹೃದಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಹೃದಯರೋಗವನ್ನು ತಡೆಗಟ್ಟಬಹುದು ಎಂದರು.

ಆಸ್ಪತ್ರೆ ಚೇರ್ಮನ್ ಡಾ.ಎಲ್.ಎಚ್.ಬಿದರಿ ಅಧ್ಯಕ್ಷತೆ ವಹಿಸಿದ್ದರು. ರೆಡ್‌ಕ್ರಾಸ್ ಉಪಾಧ್ಯಕ್ಷ ಶರದ ರೋಡಗಿ, ಕಾರ್ಯದರ್ಶಿ ಎಸ್.ಜಿ.ಮುರನಾಳ, ಖಜಾಂಚಿ ಸೋಮನಾಥ ಜೇವೂರ, ಹೃದಯರೋಗ ತಜ್ಞ ಡಾ.ಗೌತಮ್ ಒಗ್ಗರ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net