ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ

VJP 12-2
Published on

ವಿಜಯಪುರ: ನಗರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸೆವೆನ್ ಹಿಲ್ಸ್ ಬ್ಯಾಡ್ಮಿಂಟನ್ ಸಂಸ್ಥೆಯಿಂದ ಹಮ್ಮಿಕೊಂಡ ಎರಡು ದಿನದ ಬ್ಯಾಡ್ಮಿಂಟನ್ ಸ್ಪರ್ಧೆಗೆ ಶನಿವಾರ ಪ್ರಾದೇಶಿಕ ರಸ್ತೆ ಸಾರಿಗೆ ಅಧಿಕಾರಿ ವರದರಾಜ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಕ್ರೀಡೆ ದೈಹಿಕ ಬೆಳವಣಿಗೆಗೆ ಸಹಕಾರಿಯಾಗುವುದಲ್ಲದೇ ಮಾನಸಿಕವಾಗಿ ನೆಮ್ಮದಿ ನೀಡಲಿದೆ. ಹೀಗಾಗಿ ಎಲ್ಲರೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕೆಂದರು.

ಎಪಿಎಂಸಿ ಪಿಎಸ್‌ಐ ಸೋಮೇಶ ಗೆಜ್ಜಿ, ಪಾಲಿಕೆ ಮಾಜಿ ಸದಸ್ಯ ಪ್ರೇಮಾನಂದ ಬಿರಾದಾರ, ರ್ೌ ಶೇಖ, ಆರ್.ಕೆ. ದೇಶಪಾಂಡೆ, ಎ.ಎಚ್. ಸಗರ, ಮಾಣಿಕ, ಮುನೀರ, ಜುಬೇರ ಸರ್ರಾಜ, ಅಲ್ಲಿಸಾಬ ದಡೇದ, ಬಸೀರ ನದ್ಾ, ಶುಭಂ ಭಿಸೆ ಮತ್ತಿತರರಿದ್ದರು. ವಿಶ್ವನಾಥ ರೆಡ್ಡಿ ನಿರೂಪಿಸಿದರು. ಶ್ರೀಧರ ಜೋಶಿ ಪ್ರಾರ್ಥಿಸಿದರು. ಟಿ.ಬಿ. ಪಲ್ಲೇದ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net