ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

VJP 15-3
Published on

ವಿಜಯಪುರ: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಸಂಜೆ ಮೊಂಬತ್ತಿ ಬೆಳಗಿ ಮೌನಾಚರಿಸುವ ಮೂಲಕ ಹುತಾತ್ಮರ ಆತ್ಮಕ್ಕೆ ಶಾಂತಿ ಕೋರಲಾಯಿತು. ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಬ್ದುಲ್ ಖಾದರ್ ಮಾತನಾಡಿ, ಸ್ವತಂತ್ರ ಭಾರತದಲ್ಲಿ ನಡೆದ ಅತ್ಯಂತ ಘೋರ ಘಟನೆ ಪುಲ್ವಾಮಾ ದಾಳಿ. ಇಂಥ ದಾಳಿ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.
ಸೈಯದ್ ಆಫ್ತಾಬ ಖಾದ್ರಿ, ಬಡೆಪೀರ ಜುನೈದಿ, ವಸಂತ ಹೊನಮೊಡೆ, ಜಮೀರ ಬಾಂಗಿ, ಐಜಾಜ ಕಲಾದಗಿ, ಮುನೀರ ಕಾಲೇಬಾಗ, ಮನ್ಸೂರ ಅಲಿ ಪೌಜದಾರ, ಜುಬೇರ ಶೇಖ, ಬಶೀರ ಕಲಾದಗಿ, ಯಾಸೀನ ಜಾತಗಾರ, ರ್ಇಾನ ಮುಲ್ಲಾ, ವಹಿದ ಝಂಡೆವಾಲೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net