ಕಾಡುಹಂದಿ ಬೇಟೆ, 22 ಆರೋಪಿಗಳ ಬಂಧನ

arrest
Published on

ವಿಜಯಪುರ: ಇಲ್ಲಿನ ಹೊರವಲಯ ಅಲ್ಲಾಪುರ ತಾಂಡಾ ಬಳಿ ಕಾಡುಹಂದಿ ಬೇಟೆ ಆಡುತ್ತಿದ್ದ 22 ಆರೋಪಿಗಳನ್ನು ಗುರುವಾರ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಆರೋಪಿಗಳೆಲ್ಲ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದವರು ಎಂದು ತಿಳಿದು ಬಂದಿದೆ. ಆರೋಪಿಗಳಿಂದ ಎರಡು ಜೀವಂತ ಕಾಡುಹಂದಿ, ಎರಡು ಮೃತಪಟ್ಟ ಕಾಡುಹಂದಿ, ಬೇಟೆಗೆ ಉಪಯೋಗಿಸಿದ್ದ 23 ಬಲೆಗಳು, ನಾಲ್ಕು ಬೇಟೆ ನಾಯಿ, ಬುಲೆರೋ ಪಿಕ್‌ಅಪ್ ವಾಹನ ವಶಕ್ಕೆ ಪಡೆದುಕೊಳ್ಳಲಾಗಿದೆ.
ಜಿಲ್ಲಾ ಅರಣ್ಯಾಧಿಕಾರಿ ಅಶೋಕ ಪಾಟೀಲ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ.ಪಿ. ಚವಾಣ್ ಅವರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ, ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net