ಬಿಸಿಯೂಟ ಸಿಬ್ಬಂದಿಗೆ ವೇತನ ಮಂಜೂರು ಮಾಡಿ

VJP 11-4
Published on

ವಿಜಯಪುರ: ರಜಾ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ ಬಿಸಿಯೂಟ ಸಿಬ್ಬಂದಿಗೆ ಈ ಬಾರಿ ವೇತನ ಮಂಜೂರು ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಘಟಕದ ನೇತೃತ್ವ ಅಕ್ಷರ ದಾಸೋಹ ನೌಕರರು ಪರಸ್ಪರ ಅಂತರ ಕಾಯ್ದುಕೊಂಡು ಮಂಗಳವಾರ ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.
ಬೆಂಬಲ ವ್ಯಕ್ತಪಡಿಸಿದ ಹಿರಿಯ ಕಾರ್ಮಿಕ ಮುಖಂಡ ಭೀಮಶಿ ಕಲಾದಗಿ ಮಾತನಾಡಿ, ಕರೊನಾ ಹಿನ್ನೆಲೆಯಲ್ಲಿ ಬಿಸಿಯೂಟ ಕಾರ್ಯಕರ್ತೆಯರು ರಜಾ ಅವಧಿಯಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ. ಆದರೆ ಅವರಿಗೆ ವೇತನ ಮಾತ್ರ ಪಾವತಿಯಾಗಿಲ್ಲ. ಮಕ್ಕಳಿಗೆ ಆಹಾರ ಧಾನ್ಯಗಳನ್ನು ಹಲವಾರು ಜಿಲ್ಲೆಗಳಿಗೆ ಈ ನೌಕರರಿಂದಲೆ ಮಕ್ಕಳ ಮನೆಗೆ ತಲುಪಿಸುವ ಕೆಲಸ ಮಾಡುತ್ತಿದೆ. ಶಾಲೆಗಳು ಮುಚ್ಚಲಾಗಿದ್ದರು ಶಾಲೆ ಶಿಕ್ಷಕರು ಹಾಗೂ ಸಿಬ್ಬಂದಿಗೆ ವೇತನ ಸಕಾಲಕ್ಕೆ ನೀಡುತ್ತಿದೆ. ಆದರೆ ಬಿಸಿಯೂಟ ನೌಕರರಿಗೆ ಕಳೆದ ಏಪ್ರಿಲ್‌ನಿಂದ ಈವರೆಗೂ ವೇತನವಾಗಿಲ್ಲ. ಸರ್ಕಾರವು ಬೇರೆ ಬೇರೆ ವಿಭಾಗಗಳಿಗೆ ಘೋಷಣೆ ಮಾಡಿ ಜಾರಿ ಮಾಡಿದ ಯಾವುದೇ ಆರ್ಥಿಕ ಪ್ಯಾಕೆಜ್ ಸಹ ಈ ನೌಕರರಿಗೆ ನೀಡಿರುವುದಿಲ್ಲ. ಈ ನೌಕರರ ಬದುಕು ನಿಕೃಷ್ಟವಾಗಿದೆ ಎಂದು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದರು.
ಸಂಘದ ಅಧ್ಯಕ್ಷೆ ಸುರೇಖಾ ವಾಘ್ಮೋರೆ ಮಾತನಾಡಿ, ಬಿಸಿಯೂಟ ಕಾರ್ಯಕರ್ತೆಯರು ಸುದೀರ್ಘವಾದ ಹೋರಾಟ ನಡೆಸಿದ ಲವಾಗಿ ವೇತನ ನೀಡಲು ಶಿಾರಸು ದೊರಕಿದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳದಿರುವುದನ್ನು ಖಂಡನೀಯ ಎಂದರು.
ಬಿಸಿಯೂಟ ನೌಕರರಿಗೆ ಏಪ್ರಿಲ್ ತಿಂಗಳಿನಿಂದ ಶಾಲೆ ಪ್ರಾರಂಭವಾಗುವರೆಗೆ ವೇತನ ಪಾವತಿ ಮಾಡಬೇಕು. ಬಿಸಿಯೂಟ ನೌಕರರನ್ನು ಕಾಯಂ ಮಾಡಿ ಶಾಸನಾತ್ಮಕ ಸವಲತ್ತುಗಳನ್ನು ಜಾರಿಗೊಳಿಸಬೇಕು. ಲಾಕ್‌ಡೌನ್ ಅವಧಿಯಲ್ಲಿ ರೂ.7500 ರಂತೆ ಮುಂದಿನ 6 ತಿಂಗಳು ವೇತನ ನೀಡುವುದು. ಎಲ್‌ಐಸಿ ಆಧಾರಿತ ಪೆನ್ಸನ್ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು. ಬಳಿಕ ಅಕ್ಷರ ದಾಸೋಹ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸುಮಂಗಲಾ ಆನಂದಶೆಟ್ಟಿ, ನೀಲಮ್ಮ ತಡಲಗಿ, ಗುರುಬಾಯಿ ಮಠಪತಿ, ಮಲ್ಲಿಕಾರ್ಜುನ ಮಾದರ, ಡಿವೈಎ್ಐ ರಾಜಶೇಖರ ರೆಡ್ಡಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net