ಚನ್ನಮ್ಮ ಅಪ್ರತಿಮ ಹೋರಾಟಗಾರ್ತಿ

HN 26-2
Published on

ವಿಜಯಪುರ: ವೀರರಾಣಿ ಕಿತ್ತೂರಿನ ಚನ್ನಮ್ಮ ದೇಶ ಕಂಡ ಅಪ್ರತಿಮ ಹೋರಾಟಗಾರ್ತಿ ಮತ್ತು ಛಲಗಾರ್ತಿ ಎಂದು ಅಕ್ಕಮಹಾದೇವಿ ಮಹಿಳಾ ವಿವಿ ಪ್ರಭಾರ ಕುಲಪತಿ ಪ್ರೊ.ಓಂಕಾರ ಕಾಕಡೆ ಹೇಳಿದರು. ನಗರದ ಮಹಿಳಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವೀರರಾಣಿ ಚನ್ನಮ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡ ನಾಡಿನ ವೀರ ಮಹಿಳೆ. ತನ್ನ ಪುಟ್ಟ ರಾಜ್ಯದ ಉಳಿವಿಗಾಗಿ ದೊಡ್ಡ ಸೈನ್ಯವನ್ನು ಹೊಂದಿದ್ದ ಬ್ರಿಟಿಷರ ವಿರುದ್ಧ ಅತ್ಯಂತ ಧೈರ್ಯದಿಂದ ತೊಡೆ ತಟ್ಟಿ ನಿಂತ ಮಹಿಳೆ. ಬ್ರಿಟಿಷರ ವಿರುದ್ಧ ಅವಳು ನಡೆಸಿದ ಹೋರಾಟ, ಸಾಹಸ, ಅವಳು ತೋರಿಸಿದ ಧೈರ್ಯ ಇಂದು ಅವಳನ್ನು ನಮ್ಮೆಲ್ಲರ ಎದೆಯಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿದೆ ಎಂದರು.

21 ಅಕ್ಟೋಬರ್ 1824ರಂದು ಕಿತ್ತೂರು ಬ್ರಿಟಿಷರ ವಿರುದ್ಧ ಜಯ ಸಾಧಿಸಿತ್ತು, ಬ್ರಿಟಿಷರ ವಿರುದ್ಧ ಚನ್ನಮ್ಮಳ ಮುಂದಾಳತ್ವದಲ್ಲಿ ಇಡೀ ಕಿತ್ತೂರು ಸಂಸ್ಥಾನವೇ ಹೋರಾಟ ಮಾಡಿ ವಿಜಯ ಪತಾಕೆ ಹಾರಿಸಿತ್ತು. ಈ ವಿಜಯೋತ್ಸವವನ್ನೆ ಕರ್ನಾಟಕ ಸರ್ಕಾರ ಕಿತ್ತೂರು ಉತ್ಸವ ಎನ್ನುವ ಹೆಸರಿನಲ್ಲಿ ಆಚರಣೆಯನ್ನು ಜಾರಿಗೆ ತಂದಿದೆ. ಅಂತಹ ವೀರ ಮಹಿಳೆಯ ಸಾಹಸ, ಧೈರ್ಯ, ಛಲ ನಮಗೆಲ್ಲರಿಗೂ ಮಾದರಿ ಎಂದು ಹೇಳಿದರು. ಈ ವೇಳೆ ವಿವಿ ಕುಲಸಚಿವೆ ಪ್ರೊ.ಆರ್. ಸುನಂದಮ್ಮ, ಡಾ. ತಹಮೀನಾ ಕೋಲಾರ, ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ಸಿಬ್ಬಿಂದಿ ವರ್ಗದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net