ದುಡಿಯುವ ಜನತೆಗೆ ಅಧಿಕಾರ ಸಿಗಬೇಕು

VMS 23-3
Published on

ವಿಜಯಪುರ: ನಗರದ ಹುತಾತ್ಮ ವೃತ್ತದಲ್ಲಿ ಅಖಿಲ ಭಾರತ ಪ್ರಜಾಪ್ರಭುತ್ವ ಯುವ ಸಂಘಟನೆ (ಎಐಡಿವೈಒ) ಜಿಲ್ಲಾ ಸಮಿತಿಯಿಂದ ಸೋಮವಾರ ಭಗತ್‌ಸಿಂಗ್, ರಾಜಗುರು ಹಾಗೂ ಸುಖದೇವರ 90ನೇ ಹುತಾತ್ಮ ದಿನ ಆಚರಿಸಲಾಯಿತು.
ಎಐಡಿವೈಒ ಜಿಲ್ಲಾಧ್ಯಕ್ಷ ಸಿದ್ದಲಿಂಗ ಬಾಗೇವಾಡಿ ಮಾತನಾಡಿ, ಕೇವಲ ಬ್ರಿಟಿಷರಿಂದ ಸ್ವಾತಂತ್ರೃ ಪಡೆದರೆ ಸಾಲದು. ದುಡಿಯುವ ಜನತೆಗೆ ಅಧಿಕಾರ ಸಿಗಬೇಕು. ಬಡತನ, ನಿರುದ್ಯೋಗ, ರೈತರ ಆತ್ಮಹತ್ಯೆ, ಮಹಿಳೆಯರ ಮೇಲಿನ ದೌರ್ಜನ್ಯವಿಲ್ಲದ ಸಮಸಮಾಜದ ಕನಸನ್ನು ಭಗತ್‌ಸಿಂಗ್ ಕಂಡಿದ್ದರು. ಅವರ ಕನಸನ್ನು ನನಸಾಗಿಸುವ ಯುವಕರೆಲ್ಲ ಕ್ರಾಂತಿಕಾರಿಗಳ ನೈಜ ಉತ್ತರಾಧಿಕಾರಿಗಳಾಗಬೇಕು ಎಂದು ಹೇಳಿದರು.
ಎಸ್‌ಯುಸಿಐ (ಕಮ್ಯೂನಿಸ್ಟ್) ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ. ಭಗವಾನ್ ರೆಡ್ಡಿ ಮಾತನಾಡಿದರು. ಪ್ರಗತಿಪರ ಹೋರಾಟಗಾರ ಪೀಟರ್ ಅಲೆಕ್ಸಾಂಡರ್, ಮೀನಾಕ್ಷಿ ಚೌಕ್ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮೈನುದ್ದಿನ್ ಲೋಣಿ, ಶಿಕ್ಷಣ ಉಳಿಸಿ ಸಮಿತಿಯ ಭರತ್‌ಕುಮಾರ್ ಎಚ್.ಟಿ. ಉಪನ್ಯಾಸಕಿ ಲಲಿತಾ ಬಿಜ್ಜರಗಿ, ದೀಪಕ ಗುಣಕಿಮಠ ಹಾಗೂ ಬ್ಯಾಂಕ್ ನೌಕರ ಎಸ್.ಎಸ್. ಕೋರಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net