ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಅರಿವು ಅಗತ್ಯ

VJP 15-4
Published on

ವಿಜಯಪುರ: ನಗರದ ಕೃಷಿ ಉಪ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಆತ್ಮ ಯೋಜನೆಯಡಿ ‘ಆರೋಗ್ಯವೇ ಭಾಗ್ಯ’ ಶೀರ್ಷಿಕೆಯಡಿ ಮಹಿಳಾ ಕಿಸಾನ್ ದಿನದ ಅಂಗವಾಗಿ ರಾಜ್ಯಮಟ್ಟದ ವೆಬಿನಾರ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಡಾ.ಎಂ.ಬಿ. ಪಟ್ಟಣಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ದ್ರಾಕ್ಷಿ, ದಾಳಿಂಬೆ, ಲಿಂಬೆ ಮುಂತಾದ ತೋಟಗಾರಿಕೆ ಬೆಳೆಗಳನ್ನು ಹಾಗೂ ತೊಗರೆ, ಕಡಲೆ, ಜೋಳ ಮುಂತಾದ ಆಹಾರ ಮತ್ತು ವಾಣಿಜ್ಯ ಬೆಳೆ ಬೆಳೆಯಲಾಗುತ್ತಿದೆ. ಈ ಉತ್ಪನ್ನಗಳ ಸಂಸ್ಕರಣೆ ಹಾಗೂ ಮೌಲ್ಯವರ್ಧನೆಗೆ ವಿಫುಲ ಅವಕಾಶದ್ದು ರೈತರು ಈ ಬಗ್ಗೆ ವ್ಯಾಪಕ ಅರಿವು ಹೊಂದಬೇಕೆಂದರು.

ಕೃಷಿ ಅಧಿಕಾರಗಳಾದ ಪೃಥ್ವಿ, ಭಾವಿಕಟ್ಟಿ, ಆತ್ಮ ಯೋಜನೆಯ ರಾಜ್ಯಮಟ್ಟದರೈತರ ಸಲಹಾ ಸಮಿತಿ ಸದಸ್ಯೆ ಸೀತಾ ದೊಡಮನಿ, ಸಮೃದ್ಧಿ ಶಿಕ್ಷಣ ಹಾಗೂ ವಿವಿಧೋದ್ದೇಶಗಳ ಸಂಸ್ಥೆ ಅಧ್ಯಕ್ಷೆ ಮಧು ಪಾಟೀಲ, ರಾಜಶ್ರೀ ಕೋರೆಗೋಳ, ಸಿಬ್ಬಂದಿ ಪಿ.ಎಸ್. ಗವಿಮಠ, ಮನೋಜ ಶಾಹಪುರ, ಸಂಗಮೇಶ ಸಜ್ಜನ, ಸಂಗಮೇಶ ಪಾಟೀಲ ಮತ್ತಿತರರಿದ್ದರು.

ಇಂಡಿ ತಾಲೂಕಿನ ಚೋರಗಿ ಗ್ರಾಮದ ಭಾರತಿ ಮೆಡೆದಾರ ಮತ್ತು ಬಸವನ ಬಾಗೇವಾಡಿಯ ಸುನಂದಾ ಬಿರಾದಾರ ಇವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net