

ವಿಜಯಪುರ: ಬಂಜಾರ ವಿದ್ಯಾವರ್ಧಕ ಸಂಘದ ಪ್ರೌಢಶಾಲೆ ಶಿಕ್ಷಕ ಎಸ್.ವಿ. ಬುರ್ಲಿ ‘ಆಚಾರ್ಯ-2020 ರಾಜ್ಯಮಟ್ಟದ ಮಾದರಿ ತಯಾರಿಕಾ ಸ್ಪರ್ಧೆ’ಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಅಗಸ್ತ್ಯ ಇಂಟರ್ ನ್ಯಾಷನಲ್ ಫೌಂಡೇಷನ್ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕರಿಗಾಗಿ ಆನ್‌ಲೈನ್‌ನಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಶಿಕ್ಷಕ ಎಸ್.ವಿ. ಬುರ್ಲಿ ಅವರ ಮಾದರಿ ಪ್ರಥಮ ಸ್ಥಾನ ಪಡೆದಿದೆ.
ವಿಪ ಸದಸ್ಯ ಅರುಣ ಶಹಾಪುರ, ಅಗಸ್ತ್ಯ ಇಂಟರ್ ನ್ಯಾಷನಲ್ ಫೌಂಡೇಷನ್ ಚೇರ್ಮನ್ ರಾಮಜಿ ರಾಘವನ್ ಹಾಗೂ ರಿಜನಲ್ ಡೈರೆಕ್ಟರ್ ಗೀತಾ ಪಾಟೀಲ ಜಂಟಿಯಾಗಿ ಬಹುಮಾನ ವಿತರಿಸಿದರು. ಬಾಬುರಾವ್, ಸಂತೋಷಕುಮಾರ, ಬಸವರಾಜ ಹಿರೇಮಠ, ಚಂದ್ರಶೇಖರ ಅನಾಮಿ ಭಾಗವಹಿಸಿದ್ದರು.
ಸಂಸ್ಥೆ ಅಧ್ಯಕ್ಷ ಡಿ.ಎಲ್. ಚವಾಣ್, ಕಾರ್ಯಾಧ್ಯಕ್ಷ ಕೆ.ಜಿ. ರಾಠೋಡ, ಕಾರ್ಯದರ್ಶಿ ರಾಜಶೇಖರ ಚವಾಣ್, ಮುಖ್ಯೋಪಾಧ್ಯಾಯ ಇ.ಡಿ. ಲಮಾಣಿ ಮತ್ತಿತರರಿದ್ದರು.